ಕನ್ಯಾನ ಸದಾಶಿವ ಶೆಟ್ಟಿ ಭಿನ್ನಾಭಿಪ್ರಾಯ ಶಮನ

0

ಮುಂಬೈಯ ಬಂಟರ ಸಂಘದ ಆಂತರಿಕ ವಿವಾದಕ್ಕೆ ತೆರೆ ಬಿದ್ದಿದೆ ಎಂದು ತಿಳಿದು ಬಂದಿದೆ.

ಖ್ಯಾತ ಉದ್ಯಮಿಗಳು, ಕೊಡುಗೈ ದಾನಿಗಳು ಆಗಿರುವ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಬಂಟರ ಸಂಘದ ಕೆಲವು ಪದಾಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಈ ವಿಚಾರ ಬಾರಿ ಸುದ್ದಿಯಾಗಿ ಸಂಚಲನ ಸೃಷ್ಟಿಯಾಗಿತ್ತು. ಈ ಮಧ್ಯೆ ಸದಾಶಿವ ಶೆಟ್ಟಿಯವರು ತನ್ನ ಎಲ್ಲಾ ಸಮಾಜಸೇವೆಗಳನ್ನು ಮತ್ತು ಕೊಡುಗೆಗಳನ್ನು ನಿಲ್ಲಿಸುವುದಾಗಿ ಘೋಷಿಸಿದ್ದರು.

ಇದು ಬಾರೀ ಚರ್ಚೆಗೆ ಕಾರಣವಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಕನ್ಯಾನ ಸದಾಶಿವ ಶೆಟ್ಟಿಯವರು ಬಂಟ ಸಮಾಜದ ದಿಗ್ಗಜರಾದ ಐಕಳ ಹರೀಶ್ ಶೆಟ್ಟಿ ಮತ್ತು ಅಜಿತ್ ಕುಮಾರ್ ಮಾಲಾಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂದು ಪ್ರಚಾರವಾಗಿತ್ತು. ಇವರ ನಡುವಿನ ಭಿನ್ನಾಭಿಪ್ರಾಯವನ್ನು ಸರಿಪಡಿಸುವ ಪ್ರಯತ್ನ ಸತತವಾಗಿ ನಡೆದಿತ್ತು. ಇದೀಗ ಸಮಾನ ಮನಸ್ಕರು ಮುಂಬೈನಲ್ಲಿ ಸೇರಿ ವಿವಾದವನ್ನು ಬಗೆಹರಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here