







ಬೆಳಾಲು : ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ. 26 ರಿಂದ ಮಾ. 4 ರವರೆಗೆ ನಡೆಯಲಿದ್ದು ಇದರ ಅಂಗವಾಗಿ ಫೆ. 26 ರಂದು ಬೆಳಾಲಿನ ವಿವಿಧ ಸಂಘಟನೆಯ ಮಹಿಳಾ ಸದಸ್ಯರು, ಊರವರು ಸ್ವಚ್ಛತೆ ಕಾರ್ಯವನ್ನು ಶ್ರಮದಾನದ ಮೂಲಕ ನೆರವೇರಿಸಿದರು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡ, ಸಮಿತಿ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಪ್ರಭಾವತಿ, ಒಕ್ಕೂಟ, ನವೋದಯ ಸ್ವ ಸಹಾಯ, ಮತ್ತಿತರ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿ ಸಹಕರಿಸಿದರು.









