







ಬೆಳ್ತಂಗಡಿ :ತಾಲೂಕಿನ ವೈಕುಂಠಪುರ ಶಿಶಿಲದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಅಂಗವಾಗಿ ಫೆಬ್ರವರಿ 26, 2026ನೇ ಗುರುವಾರ ರಾತ್ರಿ 9.30 ಗಂಟೆಯಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.



ಮಹೋತ್ಸವ ಪ್ರಯುಕ್ತ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಖ್ಯಾತ ಕಲಾವಿದ ಮಾಸ್ಟರ್ ಅಶ್ವಿನ್ ಬೈರಕಟ್ಟ ಅವರ ಸವಿ ನೆನಪಿಗಾಗಿ “ಮುಗುರು ಮಲ್ಲಿಗೆ” ಎಂಬ ತುಳು ಕಥಾಭಾಗವನ್ನು ಬಯಲಾಟ ರೂಪದಲ್ಲಿ ಪ್ರದರ್ಶಿಸಲಿದ್ದಾರೆ.
ಈ ಯಕ್ಷಗಾನ ಪ್ರದರ್ಶನವು ಭಕ್ತರು ಹಾಗೂ ಯಕ್ಷಗಾನ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದಿಂದ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಶೀರ್ವಾದ ಪಡೆಯುವಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಚಾಮುಂಡೇಶ್ವರಿ ಯಕ್ಷಗಾನ ಬಯಲಾಟ ಸಮಿತಿಯವರು ಕೋರಿದ್ದಾರೆ.









