







ಧರ್ಮಸ್ಥಳ : ಗ್ರಾಮದ ಕೆಂಬರ್ಜೆ ದಿ. ಕೋಟಿ ಗೌಡ ಪುತ್ರ ಸುರೇಶ್ ಗೌಡ (40) ಫೆ 26 ರಂದು ಬೆಳಗ್ಗೆ ಮರದಿಂದ ಬಿದ್ದು ಮೃತ ಪಟ್ಟ ಘಟನೆ ನಡೆದಿದೆ.



ಬೆಳಗ್ಗೆ ಮಾವಿನಕಾಯಿ ಕೀಳಲು ಮರ ಹತ್ತಿದ ಸುರೇಶ್ ಅವರು ಆಕಸ್ಮಿಕವಾಗಿ ಮರದಿಂದ ರಸ್ತೆಗೆ ಬಿದ್ದ ಪರಿಣಾಮವಾಗಿ ಅಲ್ಲೆ ಸಾವನಪ್ಪಿದ್ದರು.
ಮನೆಗೆ ಆಸರೆಯಾಗಿದ್ದರು ಇವರು ಪತ್ನಿ ಮಮತಾ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ









