






ನಡ: ಗ್ರಾಮದ ಪೆರ್ಮಾಣು ಕುತ್ರೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದ ವರ್ಷಾವಧಿ ಜಾತ್ರಾ ಉತ್ಸವವು ಫೆ.೨೮ರಿಂದ ಮಾರ್ಚ್ ೫ರ ವರೆಗೆ ನಡೆಯಲಿದೆ. ಕ್ಷೇತ್ರ ತಂತ್ರಿಗಳಾದ ವೇ| ಬ್ರಹ್ಮಶ್ರೀ ವಾದಿರಾಜ ಶಬರಾಯ ಓಡಲ ಅವರ ಪೌರೋಹಿತ್ಯದಲ್ಲಿ ಉತ್ಸವ ಸಮಿತಿ ಹಾಗೂ ಊರ ಪರವೂರ ಭಕ್ತರ ಸಹಕಾರದೊಂದಿಗೆ ಜರಗಲಿದೆ. ಫೆ.೨೮ ಬೆಳಿಗ್ಗೆ ಶುದ್ಧಿಕಲಶ ನವಕ ಪ್ರಧಾನ, ತೋರಣ ಮುಹೂರ್ತ, ಮಧ್ಯಾಹ್ನ ಊರವರಿಂದ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಗಂಟೆ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಗಂಟೆ ೭-೦೦ರಿಂದ ಧ್ವಜಾರೋಹಣ, ನಿತ್ಯಬಲಿ, ಮಹಾಪೂಜೆ ನಡೆಯಲಿದೆ.


ಮಾ.೧ನೇ ಬೆಳಿಗ್ಗೆ ಗಂಟೆ ೮ರಿಂದ ೧೦೮ ತೆಂಗಿನಕಾಯಿ ಗಣಹೋಮ, ಸಾಮೂಹಿಕ ಶನೈಶ್ಚರಪೂಜೆ ೧೧.೩೦ರಿಂದ ಪೂರ್ಣಾಹುತಿ ಮಹಾಪೂಜೆ, ದೇವರಿಗೆ ಮಹಾಪೂಜೆ, ರಾತ್ರಿ ಗಂಟೆ ೭ರಿಂದ ಬಯನಬಲಿ ಉತ್ಸವ, ಕಟ್ಟೆಪೂಜೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಇರಲಿದೆ. ಮಾ. ೨ ಬೆಳಿಗ್ಗೆ ಗಂಟೆ ೭ರಿಂದ ದೀಪದ ಬಲಿ ಉತ್ಸವ, ನಿತ್ಯವಿಧಿ, ಮಧ್ಯಾಹ್ನ ಗಂಟೆ ೧೨ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ ೭ರಿಂದ ಉತ್ಸವ ಹೊರಡು ಕಟ್ಟೆಪೂಜೆ, ಮಹಾಪೂಜೆ, ಭಜನಾ ಕಮ್ಮಟ ಸುತ್ತಮುತ್ತಲಿನ ಭಜನಾ ತಂಡಗಳಿಂದ ಕಾರ್ಯಕ್ರಮ ನಡೆಯಲಿದೆ.
ಮಾ.೩ ಬೆಳಿಗ್ಗೆ ಗಂಟೆ ೭ರಿಂದ ಉತ್ಸವ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ನಿತ್ಯವಿಧಿ, ನಾಗನಕಟ್ಟೆಯಲ್ಲಿ ಆಶ್ಲೇಷ ಬಲಿ, ನಾಗನಿಗೆ ತನುಪೂಜೆ ಮಧ್ಯಾಹ್ನ ಗಂಟೆ ೧೨-೦೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಗಂಟೆ ೬-೩೦ರಿಂದ ಉತ್ಸವ, ರಾತ್ರಿ ಗಂಟೆ ೭-೦೦ರಿಂದ ಬಂಡಾರ ಹೊರಡುವುದು ನಂತರ ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ.
ರಾತ್ರಿ ಗಂಟೆ ೮-೦೦ರಿಂದ ಯPಹಾಸ್ಯ ವೈಭವ ಶ್ರೀ ಸುಂದರ ಬಂಗಾಡಿ ಮತ್ತು ತಂಡದವರಿಂದ ನಂತರ ಕ್ಷೇಮಕಲ್ಲ ಪಂಜುರ್ಲಿ ದೈವ ನೇಮೋತ್ಸವ ಭೂತಬಲಿ, ಶಯನ ಕವಾಟ ಬಂಧನ ನಡೆಯಲಿದೆ. ಮಾ.೦೪ ಬೆಳಿಗ್ಗೆ ಗಂಟೆ ೯-೩೦ ಮೇಷ ಲಗ್ನ ಸುಮುಹೂರ್ತದಲ್ಲಿ ಕವಾಟೋದ್ಘಾಟನೆ, ನಿತ್ಯವಿಧಿ, ಮಹಾಪೂಜೆ ಸಂಜೆ ಗಂಟೆ ೬-೩೦ರಿಂದ ಉತ್ಸವ ಹೊರಟು ಅಂಗಣ ಪಿಲಿಚಾಮುಂಡಿ ದೈವದ ನೇಮ, ಕಟ್ಟೆಪೂಜೆ ದೇವರ (ಜಳಕ) ಸ್ನಾನ ಬಳಿಕ, ಧ್ವಜಾವರೋಹಣ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಕೇಶ್ವರಿ ಕುಟ್ನಾಯ ದೈವಗಳ ನೇಮೋತ್ಸವ ನಡೆಯಲಿದೆ. ಮಾ.೦೫ ಬೆಳಿಗ್ಗೆ ಗಂಟೆ ೬-೩೦ರಿಂದ ಸಂಪ್ರೋPಣೆ, ನಿತ್ಯವಿಧಿ, ಮಹಾಪೂಜೆ, ಪ್ರಸಾದ ವಿತರಣೆ.ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕೇಸರರು, ತಂತ್ರಿಗಳು ವಿಲಯದವರು, ಉತ್ಸವ ಸಮಿತಿಯ ಎ ಪದಾಧಿಕಾರಿಗಳು ತಿಳಿಸಿzರೆ.









