ಮಾ. 4: ಶ್ರೀ ರಾಮ ಕ್ಷೇತ್ರ ಭಟ್ಕಳ ಕರಿಕಲ್ ಧ್ಯಾನ ಮಂದಿರದ ಪ್ರತಿಷ್ಠಾ ವರ್ಧಂತಿ

0

ಧರ್ಮಸ್ಥಳ : ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಭಟ್ಕಳ ಕರಿಕಲ್ ಸಮುದ್ರ ಕಿನಾರೆಯ “ಧ್ಯಾನ ಕುಟೀರ”ದ ಪ್ರತಿಷ್ಠಾಪನೆಗೊಂಡ ಶ್ರೀರಾಮ ದೇವರ “ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಸಮಾರಂಭ ಮಾರ್ಚ್ 4 ರಂದು ನೆರವೇರಲಿದೆ.

ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ 7-00 ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ “ರಾಮತಾರಕ ಮಹಾಯಜ್ಞ” ನಡೆಯಲಿರುವುದು.

ಬೆಳಿಗ್ಗೆ ಗಂಟೆ 10-00 ರಿಂದ 12-00ರ ತನಕ ಭಕ್ತ ಮಂಡಳಿಯವರಿಂದ ಭಜನೆ,ಮಧ್ಯಾಹ್ನ ಶ್ರೀ ಗಳಿಂದ ಆಶೀರ್ವಚನ, ನಂತರ “ಅನ್ನಸಂತರ್ಪಣೆ” ನಡೆಯಲಿದೆ. ಎಂದು ಭಟ್ಕಳ ಶಾಖಾ ಮಠದ ಪ್ರಕಟಣೆಯಲ್ಲಿ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here