






ಕಲ್ಲಂಜ: ಕಂದೂರು ಭಾಗದ ಅಜಿತ್ ನಗರ ವಾರ್ಡಿನಲ್ಲಿ ಅನೇಕ ವರ್ಷಗಳಿಂದ ಮೂಲಭೂತ ಸೌಕರ್ಯ ಸಿಗದೆ ವಂಚಿತವಾಗಿದೆ ಎಂದು ಕಲ್ಮಂಜ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಗ್ರಾಮ್ಬರು ತಿಳಿಸಿದರು.ಕಲ್ಮಂಜ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಆಡಳಿತಾಧಿಕಾರ ಡಾ. ರವಿ ಕುಮಾರ್ ಎಂ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಫೆ. 25ರಂದು ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಸಹಾಯಕ ತೋಟಗಾರಿಕಾ ನಿರ್ದೇಶಕರು, ತೋಟಗಾರಿಕೆ ಸಸ್ಯಕ್ಷೇತ್ರ, ಮದ್ದಡ್ಕ ಮಂಜುನಾಥ್ ಎಚ್.ಎನ್. ಅವರು ಸಭೆಯನ್ನು ಮುನ್ನಡೆಸಿದರು.ಅಜಿತ್ ನಗರದ ವಾರ್ಡ್ ಜನರು ತೆರಿಗೆಗಳನ್ನು ಕಟ್ಟಿಕೊಂಡು ಬರುತಿದ್ದೇವೆ, ಆದರೆ ದಾರಿದೀಪ, ರಸ್ತೆ ನಿರ್ಮಾಣ. ಯಾವುದು ನಡೆದಿಲ್ಲ. ರಸ್ತೆಗೆ ತಾಗಿಕೊಂಡು ಇರುವ ಗಿಡಗಳನ್ನು ಊರಿನವರು ಸೇರಿ ಸ್ವಚ್ಛ ಮಾಡುತ್ತೇವೆ . ಇದರ ಫೋಟೋ ಪಂಚಾಯತ್ಗೆ ಕಳುಹಿಸಿ ಕೊಟ್ಟಿದ್ದೇವೆ. ದಯವಿಟ್ಟು ಮುಂದಿನ ಕ್ರಿಯಾ ಯೋಜನೆಯಲ್ಲಿ ವಾರ್ಡ್ ಕಡೆಗಣಿಸದೆ ಅನುದಾನವನ್ನು ಇಡಬೇಕು ಎಂದು ಹರೀಶ್ ಸುವರ್ಣ ತಿಳಿಸಿದರು.

ಮುಂದಿನ ಯೋಜನೆಯಲ್ಲಿ ಮಾಡಿಕೊಡಲಾಗುವುದು ಎಂದು ಅಧಿಕಾರಿ ಹೇಳಿದರು.ಅಕ್ಷಯನಗರದ ಗಾಂಜಲು ರಸ್ತೆ ಅನೇಕ ವರ್ಷಗಳಿಂದ ಅಭಿವೃದ್ಧಿಯಾಗದೆ ಅಲ್ಲಿನ ಜನರಿಗೆ ತುರ್ತು ಸಂದರ್ಭದಲ್ಲಿರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ಹೋಗಲು ತುಂಬಾ ಕಷ್ಟವಾಗುತ್ತಿದೆ. ರಸ್ತೆಯನ್ನು ಸರಿಪಡಿಸಿ ಕೊಡಲು ನಿವೃತ ಯೋಧ ತಿಮ್ಮಪ್ಪ ಗೌಡ ಹೇಳಿದರು.ಸಾರ್ವಜನಿಕ ರಸ್ತೆ ನಿರ್ಮಾಣ ಆಗುವಾಗ ಒಂದು ಮನೆಯ ವ್ಯಕ್ತಿಯ ಹೆಸರು ಉಲ್ಲೇಖ ಮಾಡೋದು ಸರಿಯಲ್ಲ ಎಂದು ಸೇಸಪ್ಪ ಕಂದೂರು ಹೇಳಿದಾಗ, ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ 15ನೇ ಹಣಕಾಸು ಯೋಜನೆಯಲ್ಲಿ ರಸ್ತೆ ಕಾಮಗಾರಿಣ ಎಲ್ಲಿಂದ ಎಲ್ಲಿಯವರೆಗೆ ನಿರ್ಮಾಣವಾಗಿದೆ ಎಂದು ತಿಳಿಸಬೇಕಾಗುತ್ತದೆ. ಹಾಗಾಗಿ ಹಾಕಿದ್ದೇವೆ. ಎಂದರು.ವಿದ್ಯುತ್ ತಂತಿಗಳಿಗೆ ಮರ ಬಿದ್ದರೆ ತಕ್ಷಣ ಸಂಪರ್ಕವನ್ನು ಕಡಿತ ಮಾಡಲು ಹೇಳಿದರೆ, ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಮಾಡುತ್ತೇವೆ ಎಂದು ತಿಳಿಸುತ್ತಾರೆ.



ನಂತರ ಫೋನ್ ಸಂಪರ್ಕಕ್ಕೂ ಸಿಗುವುದಿಲ್ಲ, ಇದರಿಂದ ಮನೆಗೆ ಬಂದ ಕೆಲಸದವರಿಗೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಿಂದೆ ಮೆಸ್ಕಾಂ ಸಿಬ್ಬಂದಿಗಳು ಉತ್ತಮ ಕೆಲಸಗಳನ್ನು ಮಾಡುತ್ತಿದ್ದರು. ಯಾವುದೇ ವಿಷಯ ಇದ್ದರೂ ನನಗೆ ತಿಳಿಸಿ ಎಂದು ಅಧಿಕಾರಿ ತಿಳಿಸಿದರು.ಅರಣ್ಯ ಇಲಾಖೆ ಅಧಿಕಾರಿ ಮಾತನಾಡಿ, ಉಡುಪಿಯಿಂದ ಚಿರತೆ ಬೊನು ತಂದಿದ್ದೇವೆ. ಪ್ರಾಣಿಗಳ ತೊಂದರೆ ಇದ್ದರೆ ಯಾವುದೇ ಸಮಯದಲ್ಲಿ ಕರೆ ಮಾಡಿದರು ಸ್ಪಂದಿಸುತ್ತೇವೆ ಎಂದು ಅಧಿಕಾರಿ ಕಮಲ ತಿಳಿಸಿದರು.ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪೂರ್ಣಿಮಾ ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು, ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು,ಕಂದಾಯ ಇಲಾಖೆ, ಅರಣ್ಯ ಇಲಾಖೆ, ವೈದ್ಯಧಿಕಾರಿ, ಪಶು ಇಲಾಖೆ,ಮತ್ತು ಮೆಸ್ಕಾಂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಸಂಗಮ ಯುವಕ ಮಂಡಲ ಸತ್ಯನಪಾಲ್ಕೆ ತಂಡಕ್ಕೆ ಪಂಚಾಯತ್ ವತಿಯಿಂದ ಆಟೋಟ ಸ್ಪರ್ಧೆಯ ಕಿಟ್ ವಿತರಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಆರ್. ಸಾಲಿಯಾನ್ ವರದಿ ಪ್ರಸ್ತಾಪಿಸಿ ಕಾರ್ಯದರ್ಶಿ ಸರೋಜಿನಿ ಕೆ. ಸ್ವಾಗತಿಸಿ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆ ಪ್ರಸ್ತಾಪಿಸಿದರು. ಪಂಚಾಯತ್ ಸಿಬ್ಬಂದಿ ರಾಕೇಶ್ ಜಮಾ ಖರ್ಚು ಬಗ್ಗೆ ತಿಳಿಸಿದರು. ಸಿಬ್ಬಂದಿ ರಮೇಶ್ ವಂದಿಸಿದರು.
ಚರ್ಚಾ ವಿಷಯಗಳು– ಸಿದ್ದಬೈಲು ಪರಾರಿ ಶಾಲೆಗೆ ಸ್ವಚ್ಛತಾ ವಾಹನ ಬರುವ ಬಗ್ಗೆ.ರಸ್ತೆ ಬದಿಯ ಗಿಡಗಳು ಮಾರ್ಗಕ್ಕೆ ಅಡ್ಡಲಾಗಿ ಬಂದಿರುವುದನ್ನು ತೆರವು ಮಾಡುವುದು- ಶಾಲೆಗಳಿಗೆ ಬೇಕಾದ ಶೌಚಾಲಯ ಮತ್ತು ಕೊಠಡಿ ನಿರ್ಮಾಣ ಮಾಡಬೇಕು- ಶಿಕ್ಷಕರ ಕೊರತೆಕಾಡು ಪ್ರಾಣಿ ಹಾವಳಿ, ಗ್ರಾಮದ ರಸ್ತೆ ಅಭಿವೃದ್ಧಿ ಕುರಿತು ಚರ್ಚೆ









