ಬೆಳ್ತಂಗಡಿ: ಮಾನಸಿಕ ಅಸ್ವಸ್ಥನನ್ನು ಸಿಯೋನ್ ಆಶ್ರಮಕ್ಕೆ ಸೇರಿಸಿದ ಬೆಳ್ತಂಗಡಿ ಪೊಲೀಸರು

0

ಬೆಳ್ತಂಗಡಿ: ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಬೆಳ್ತಂಗಡಿಯ ಮಾನಸಿಕ ಅಸ್ವಸ್ಥ ಪ್ರದೀಪ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಸಿಯೋನ್ ಅಶ್ರಮಕ್ಕೆ ಸೇರಿಸಿದ್ದಾರೆ.

ಬೆಳ್ತಂಗಡಿ ಬಸ್ ನಿಲ್ದಾಣ ಸೇರಿದಂತೆ ಗುರುವಾಯನಕೆರೆ ಸುತ್ತಮುತ್ತಲಿನಲ್ಲಿ ಅರೆಬೆತ್ತಲೆಯಾಗಿ ತಿರುಗಾಡುತ್ತಿದ್ದ ಪ್ರದೀಪ್ ಎಂಬಾತನನ್ನು ನೆರಿಯ ಆಶ್ರಮಕ್ಕೆ ಸೇರಿಸಲಾಗಿತ್ತು, ಚಿಕಿತ್ಸೆಯು ನಡೆಯುತ್ತಿತ್ತು, ಆದರೆ ಕಳೆದ ಕೆಲ ದಿನಗಳ ಹಿಂದೆ ನೆರಿಯ ಸಿಯೋನ್ ಆಶ್ರಮದಿಂದ 15/9/25 ರಂದು ಪ್ರದೀಪ್ ಸ್ನೇಹಿತರು ಕರೆದುಕೊಂಡು ಹೋಗಿದ್ದು ನಂತರ ಮತ್ತೆ ಬೆಳ್ತಂಗಡಿಯಲ್ಲಿ ಸುತ್ತಾಡುತ್ತ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಫೆ.23 ರಂದು ಬೆಳ್ತಂಗಡಿ ಪೊಲೀಸರು ಆತನನ್ನು ಪತ್ತೆ ಹಚ್ಚಿ ಸಾಯಿ ರಾಮ್ ಆಂಬುಲೆನ್ಸ್ ಚಾಲಕ ಪವನ್ ಬಂಗೇರ ಆಂಬುಲೆನ್ಸ್ ನಲ್ಲಿ ನೆರಿಯ ಸಿಯೋನ್ ಅಶ್ರಮಕ್ಕೆ ಮತ್ತೆ ಸೇರಿಸಿದ್ದಾರೆ.

LEAVE A REPLY

Please enter your comment!
Please enter your name here