ಫೆ.26 ರಂದು ಮಿತ್ತಬಾಗಿಲುನಲ್ಲಿ ದೇಸಿ ತಳಿಗಳ ಸಂರಕ್ಷಣೆ ಕುರಿತು ರೈತರಿಗೆ ತರಬೇತಿ ಕಾರ್ಯಾಗಾರ

0

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗ್ರಾಮ ಕುಕ್ಕಾವು ಬಿ.ಕೆ. ಪರಮೇಶ್ವರ ರಾವ್ ಇವರ ಮನೆಯ ಆವರಣದಲ್ಲಿ ದೇಸಿ ತಳಿಗಳ ಸಂರಕ್ಷಣೆ ಕುರಿತು ರೈತರಿಗೆ ತರಬೇತಿ ಕಾರ್ಯಾಗಾರವನ್ನು ಫೆ.26 ರಂದು ಬೆಳಿಗ್ಗೆ 10.30 ರಿಂದ ಹಮ್ಮಿಕೊಂಡಿದ್ದು, ರಾಷ್ಟ್ರೀಯ ಸಸ್ಯತಳಿ ಸಂರಕ್ಷಕ ರೈತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ರೈತ ಪೀಠ ಪ್ರಶಸ್ತಿ ಪುರಸ್ಕೃತ ತಳಿ ಸಂರಕ್ಷಕ ಬಿ. ಕೆ. ದೇವರಾವ್ ಇವರು ಉಪಸ್ಥಿತರಿರಲಿದ್ದು , ದೇಸಿ ಬತ್ತಗಳ ತಾಕಿಗೆ ಕ್ಷೇತ್ರ ಭೇಟಿ ಮೂಲಕ ವಿವಿಧ ಪ್ರಬೇಧಗಳ ಸ್ಥಳೀಯ ಬತ್ತದ ಮಾಹಿತಿ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಬೆಳ್ತಂಗಡಿ ಕೃಷಿ ಇಲಾಖೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here