







ಬೆಳ್ತಂಗಡಿ : ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವವು ಫೆ. 25ರಂದು ಮೊದಲ್ಗೊಂಡು ಮಾ. 1ರ ವರೆಗೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನದೊಂದಿಗೆ ತೌಳವ ಪರಂಪರೆಯ ಅನುಸಾರ ನಡೆಯಲಿರುವುದು.
ಫೆ. 28 ಶನಿವಾರ ಮಹಾಪೂಜೆಯ ಬಳಿಕ ಮಡಿಲು ಸೇವೆ ಪ್ರಸಾದ ವಿತರಣೆ ನೆರವೇರಲಿದೆ.ಈ ಪುಣ್ಯ ದೇವತಾ ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ, ತ್ರಿಕರಣಪೂರ್ವಕ ಸಹಕಾರ ನೀಡಿ, ಮೂಲಸ್ಥಾನ ಕ್ಷೇತ್ರದ ಸಿರಿಮುಡಿ ಗಂಧಪ್ರಸಾದ ಸ್ವೀಕರಿಸುವಂತೆ ಆಢಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಧಾರ್ಮಿಕ ಕಾರ್ಯಕ್ರಮಗಳು; ಫೆ. 25 ರಂದು ಸಂಜೆ 5.30ರಿಂದ ಸ್ವಸ್ತಿ ಪುಣ್ಯಾಹ ಸ್ಥಳಶುದ್ಧಿ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮೂಹೂರ್ತ ನಡೆಯಲಿರುವುದು.


ಫೆ.26ರಂದು ಗಣಪತಿ ಹೋಮ, ಗುರುಪೂಜೆ, ತೋರಣ ಮೂಹೂರ್ತ, ನಾಗದೇವರ ಸಾನಿಧ್ಯದಲ್ಲಿ ನವಕಲಶ, ಆಶ್ಲೇಷ ಬಲಿ ಮತ್ತು ಧೂಮಾವತಿ ಸಾನಿಧ್ಯ ಹಾಗೂ ಎಲ್ಲಾ ಪರಿವಾರ ಸಾನಿಧ್ಯದಲ್ಲಿ ಶುದ್ದಿ ನವಕ ಕಲಶಾಭಿಷೇಕ, 11.35ಕ್ಕೆ ಧ್ವಜಾರೋಹಣ, ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ಸಂಜೆ 6.00ರಿಂದ ಭಗವತೀ ಸೇವೆ, ಧೂಮಾವತಿ ಬಲಿ ಉತ್ಸವ ರಾತ್ರಿ 8.00ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ರಾತ್ರಿ 8.30ಕ್ಕೆ ಕಲ್ಲಾಲ್ದಾಯ ಗುಳಿಗ ನೇಮೋತ್ಸವ ನಡೆಯಲಿರುವುದು.
ಮಾ.27 ಬೆಳಿಗ್ಗೆ ಗಂ 6 ರಿಂದ ಗಣಪತಿ ಹೋಮ, ಧೂಮಾವತಿ ಸಾನಿಧ್ಯದಲ್ಲಿ ಶುದ್ದಿ ಕ್ರಿಯೆಗಳು,8 ರಿಂದ ಧೂಮಾವತಿ ದೈವದ ಭಂಡಾರ ಇಳಿಯುವುದು, 9 ರಿಂದ ಧೂಮಾವತಿ ನೇಮೋತ್ಸವ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಸಂಜೆ ಗಂ 6 ರಿಂದ ಧೂಮಾವತಿ ಬಲಿ ಉತ್ಸವ, ರಾತ್ರಿ 7.00ರಿಂದ ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವುದು, 7.30ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ರಾತ್ರಿ 8.30ರಿಂದ ಕುಪ್ಪೆ ಪಂಜುರ್ಲಿ ಮತ್ತು ಕೊರತಿ ನೇಮೋತ್ಸವ ನಡೆಯಲಿದೆ.
ಮಾ. 28 ಶನಿವಾರ ಬೆಳಿಗ್ಗೆ 6 ರಿಂದ ಗಣಪತಿ ಹೋಮ, ಎಲ್ಲಾ ಸಾನಿಧ್ಯಗಳಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಮಹಾಪೂಜೆಯ ನಂತರ ಮಡಿಲು ಸೇವೆ ಪ್ರಸಾದ ವಿತರಣೆ ನಡೆಯಲಿರುವುದು. ಸಂಜೆ 5.30ರಿಂದ ಧೂಮಾವತಿ ಬಲಿ ಉತ್ಸವ, ರಾತ್ರಿ 7.30ಕ್ಕೆ ಬೈದರ್ಕಳರು ಗರಡಿ ಇಳಿಯುವುದು, 8.30ರಿಂದ ದೇಯಿಬೈದೆತಿ ನೇಮೋತ್ಸವ ಮಾತೆ ಮಕ್ಕಳ ಪುನೀತ ಸಮಾಗಮ 9 ರಿಂದ ದೇಯಿಬೈದೆತಿ ಪ್ರಸಾದ ವಿತರಣೆ. ದೇಯಿ ಬೈದೆತಿ ಸಮಾಧಿಯಲ್ಲಿ ದೀಪಾರಾಧನೆ, ಬೈದರ್ಕಳ ದರ್ಶನ, ಬೈದರ್ಕಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿರುವುದು.
ಮಾ 1 ಆದಿತ್ಯವಾರ ಬೆಳಿಗ್ಗೆ 5.00ರಿಂದ ಗಣಹೋಮ ಹಾಗೂ ಎಲ್ಲಾ ಸಾನಿಧ್ಯಗಳಲ್ಲಿ ಶುದ್ದಿ ಕ್ರಿಯೆಗಳು, ಕಲಶಾಭಿಷೇಕ, ಧ್ವಜಾವರೋಹಣ ಗುರುಪೂಜೆ,ಪ್ರಸಾದ ವಿತರಣೆ ನಡೆಯಲಿದೆ.









