







ಮಡಂತ್ಯಾರು: ಗ್ರಾಮ ಪಂಚಾಯತಿಯು ಭಾರತೀಯ ಜನತಾ ಪಾರ್ಟಿ ಪೂರ್ಣ ಬಹು ಮತದೊಂದಿಗೆ ಅಧಿಕಾರಕ್ಕೆ ಬರುವಲ್ಲಿ, ಬೆಳ್ತಂಗಡಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಹರಿಕಾರ ಶಾಸಕ ಹರೀಶ್ ಪೂಂಜ ಅವರ ಶ್ರಮ ಅಪಾರವಾದುದು. ತದನಂತರದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಮತ್ತು ಗ್ರಾಮ ಪಂಚಾಯತಿಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮಾರ್ಗದರ್ಶನ ನೀಡಿ ಕೋಟಿ ಕೋಟಿ ಅನುಧಾನಗಳನ್ನು ಒದಗಿಸಿದ ಶಾಸಕ ಹರೀಶ್ ಪೂಂಜ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಮಡಂತ್ಯಾರು ಗ್ರಾಮ ಪಂಚಾಯತಿ 2021 ರಿಂದ 2026 ರವರೆಗಿನ ಆಡಳಿತ ಮಂಡಳಿಯಲ್ಲಿ ಮೊದಲ ಅವಧಿಗೆ ಶಶಿಪ್ರಭಾ ಅಧ್ಯಕ್ಷೆಯಾಗಿ, ಸಂಗೀತಾ ಶೆಟ್ಟಿ ಉಪಾಧ್ಯಕ್ಷೆಯಾಗಿದ್ದರು.ಎರಡನೇ ಅವಧಿಗೆ ರೂಪ ಎ. ಎಸ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.


ಗೋಪಾಲಕೃಷ್ಣ ಕುಕ್ಕಳ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಡಂತ್ಯಾರು ಗ್ರಾಮ ಪಂಚಾಯತಿ ಕಲಿಕಾ ಕೇಂದ್ರ, ಅಮೃತ ಉದ್ಯಾನವನ, ಸಂಜೀವಿನಿ ಕಟ್ಟಡ ನಿರ್ಮಾಣದಂತಹ ಪ್ರಮುಖ ಕಾಮಗಾರಿಗಳ ಜೊತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪ. ಎ.ಎಸ್ ಮತ್ತು ಗೋಪಾಲಕೃಷ್ಣ ಕೆ ಅವರ ಅಧಿಕಾರಾವಧಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದಕ್ಕೆಲ್ಲಾ ಶಾಸಕರ ಪ್ರೇರಣೆ ಮತ್ತು ಅನುಧಾನಗಳ ಬೆಂಬಲ ಮಹತ್ವಪೂರ್ಣವಾಗಿತ್ತು.
ಶಕ್ತಿ ಕೇಂದ್ರ ಪ್ರಮುಖರಾದ ಕಾಂತಪ್ಪ ಗೌಡ, ಶೈಲೇಶ್. ಪಿ. ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತಿ ಲಕ್ಷ್ಮಣ್, ಬೂತ್ ಅಧ್ಯಕ್ಷ, ಕಾರ್ಯದರ್ಶಿ ಗಳಾದ ರಾಜೇಶ್, ಗಿರೀಶ್ ಅನಿಲೆಡೆ, ಪ್ರವೀಣ್ ಶೆಟ್ಟಿ ಕುರ್ಡುಮೆ, ನವೀನ್ ಕೊಡ್ಲಕ್ಕೆ, ಗ್ರಾ.ಪಂ. ಅಧ್ಯಕ್ಷೆ ರೂಪ. ಎ.ಎಸ್, ಉಪಾಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ, ಮಾಜಿ ಅಧ್ಯಕ್ಷೆ ಶಶಿಪ್ರಭಾ, ಮಾಜಿ ಉಪಾಧ್ಯೆಕ್ಷೆ ಸಂಗೀತಾ ಶೆಟ್ಟಿ, ಸದಸ್ಯರುಗಳಾದ ಶ್ರೀ ವಿಶ್ವನಾಥ ಪೂಜಾರಿ, ಹರಿಪ್ರಸಾದ್ ಶೆಟ್ಟಿ, ರಾಜೀವ ಪೂಜಾರಿ, ಶೀಲಾವತಿ, ಮೋಹಿನಿ ಉಪಸ್ಥಿತರಿದ್ದರು.









