







ಕರಂಬಾರು: ಶಾಲಾ ಅಭಿಮಾನಿಗಳ ಬಳಗ ಮತ್ತು ಹಳೆ ವಿದ್ಯಾರ್ಥಿ ಸಂಘ ಕರಂಬಾರು ಶಾಲೆ ಇವರ ನೇತೃತ್ವದಲ್ಲಿ ಫೆ.22 ರಂದು ಕರಂಬಾರು ಶಾಲೆಯ ತೋಟಗಾರಿಕೆ ಮತ್ತು ಇತರ ಕಾರ್ಯ ಚಟುವಟಿಕೆಗಳ ಪ್ರಯುಕ್ತ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವನನ್ನು ನಡೆಸಲಾಯಿತು.

ಪಂದ್ಯವನ್ನು ಅಳದಂಗಡಿ ಶ್ರೀ ಕ್ಲಿನಿಕ್ ನ ಡಾ|ಎನ್ ಎಂ ತುಲುಪುಳೆ ಉದ್ಘಾಟಿಸಿದ್ದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಜಿಮುಗೇರು ಮನೆತನದವರಾದ ಸೀತಾರಾಮ ಹೆಬ್ಬಾರ್ ವಹಿಸಿಕೊಂಡಿದ್ದರು.


ಮುಖ್ಯ ಅತಿಥಿಗಳಾಗಿ ಭೂ ನ್ಯಾಯ ಮಂಡಳಿ ಸದಸ್ಯರಾದ ಬಾಬು ಎ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ. ಮುರಳೀಧರ ಬಲಿಪ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎಂ.ಕೆ., ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸಂತೋಷ್ ಹೆಗ್ಡೆ ಪರ್ಲಾಂಡ, ಸತ್ಯ ಶ್ರೀ ಫ್ರೆಂಡ್ಸ್ ಅಧ್ಯಕ್ಷ ಉಮೇಶ್ ಬಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ರಮೇಶ್ ಛೌವಣ್ ಸ್ವಾಗತಿಸಿದರು. ಶಾಲಾ ಜ್ಞಾನ ದೀಪ ಶಿಕ್ಷಕ ಸದಾಶಿವ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.









