






ನೆರಿಯ: ಸಂಜೆ ಸುರಿದ ಧಾರಾಕಾರ ಮಳೆ ಗಾಳಿಗೆ ಬಸ್ತಿ ಧರ್ಮಸ್ಥಳ ಮುಖ್ಯ ರಸ್ತೆಯ ಬಸ್ತಿ ನಾಯಿಕಟ್ಟೆ ಎಂಬಲ್ಲಿ ಬೃಹತಾಕಾರದ ಮರ ಬಿದ್ದು ವಿದ್ಯುತ್ ಕಂಬ ಹಾನಿ ಉಂಟಾಗಿದೆ.ಮರ ಹಾಗೂ ಕಂಬ ಜೊತೆಗೆ ತಂತಿ ರಸ್ತೆಯಲ್ಲಿ ಇದ್ದು ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದೆ.



ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. *ಅಣಿಯೂರಿನಲ್ಲಿ ಕ್ಯಾಂಟೀನ್ ಗೆ ಹಾನಿ* ಮಳೆ ಜೊತೆಗೆ ರಭಸವಾಗಿ ಬೀಸಿದ ಗಾಳಿಗೆ ಅಣಿಯೂರಿನಲ್ಲಿ ಕ್ಯಾಂಟೀನ್ ನ ಮೇಲ್ಚಾವಣಿ ಹಾನಿಯಾದ ಘಟನೆ ನಡೆದಿದೆ.









