









ಬೆಳ್ತಂಗಡಿ: ಬೆಳ್ತಂಗಡಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಸಲಿಂಗಯ್ಯ ಜಿ ಸುಬ್ಬಾಪುರಮಠ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆಗೆ ಅವರನ್ನು ವರ್ಗಾವಣೆ ಮಾಡಲಾಗಿದ್ದು ಬೆಳ್ತಂಗಡಿಯಲ್ಲಿ ಖಾಲಿಯಾಗುವ ಹುದ್ದೆಗೆ ಯಾರನ್ನೂ ನಿಯುಕ್ತಿಗೊಳಿಸಿಲ್ಲ. ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನವರಾದ ಸುಬ್ಬಾಪುರಮಠ್‌ರವರು ಈ ಹಿಂದೆ ಗುಲ್ಬರ್ಗ, ವಿಜಯಪುರ, ಕಾರ್ಕಳ, ಬೆಳ್ತಂಗಡಿ, ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಮುರುಗೋಡು, ಗದಗ ಜಿಲ್ಲೆಯ ನರೇಗಲ್ ತಾಲೂಕು ಹಾಗೂ ಬೆಳ್ತಂಗಡಿಯಲ್ಲಿ ಎರಡು ವರ್ಷ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.








