






ಬೆಳ್ತಂಗಡಿ: ತಾಲೂಕಿನ ಮಲೆಯಡ್ಕ ಎಂಬಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಮುಗ್ರೋಡಿ ಕನ್ಸ್ಟ್ರPನ್ ನಡೆಸಿದೆ ಎನ್ನಲಾದ ದೌರ್ಜನ್ಯಗಳ ಆರೋಪಗಳ ಕುರಿತಾಗಿ ಇದೀಗ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಪ್ರವೇಶ ತೀವ್ರ ಕುತೂಹಲ ಮೂಡಿಸಿದೆ. ೨೦೦೮ರಿಂದ ಪ್ರಾರಂಭಗೊಂಡು ಹಾಟ್ ಮಿಕ್ಸಿಂಗ್ ಮತ್ತು ಕಾಂಕ್ರೀಟ್ ಮಿಕ್ಸಿಂಗ್ನಲ್ಲಿ ನಿರತವಾಗಿದ್ದ ಮುಗ್ರೋಡಿ ಕನ್ಸ್ಟ್ರPನ್ ಕಳೆದ ಕೆಲ ವರ್ಷದಿಂದ ಸೂಕ್ತ ಚಿಮಿಣಿ ಅಳವಡಿಸದೆ, ಧೂಳು ನಿಯಂತ್ರಿಸದೆ ಆಹೋರಾತ್ರಿ ಹಾಟ್ ಮಿಕ್ಸಿಂಗ್ನಲ್ಲಿ ತೊಡಗಿತ್ತು. ಇದರಿಂದ ಬಿಡುಗಡೆಗೊಂಡ ರಾಸಾಯನಿಕ ಕಲ್ಮಷಗಳು ಉಜಿರೆ ಮತ್ತು ನಡ ಗ್ರಾಮಗಳ ನಿವಾಸಿಗಳಿಗೆ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡಿದ್ದವು ಎಂದು ಆರೋಪಿಸಿ, ಹೋರಾಟಕ್ಕಿಳಿದ ಮಲೆಯಡ್ಕ, ಉಜಿರೆ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು.


ಈ ಕುರಿತು ವೈದ್ಯಕೀಯ ವರದಿ, ಜಿಪಿಎಸ್ ಫೋಟೋ, ಜನಪ್ರತಿನಿಧಿಗಳ ಬಳಿ ಅಹವಾಲು ಮತ್ತು ಸರಕಾರದ ನಾನಾ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಕರ್ನಾಟಕ ಉಚ್ಚ ನ್ಯಾಯಾಲಯ ಪ್ರಕರಣ ಆಲಿಸಿ ಜಿಧಿಕಾರಿ, ನಡ ಪಂಚಾಯತ್ ಪಿಡಿಓ, ಮಾಲಿನ್ಯನಿಯಂತ್ರಣ ಮಂಡಳಿ, ತಹಶೀಲ್ದಾರ್ ಬೆಳ್ತಂಗಡಿ, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮುಗ್ರೋಡಿ ಕನ್ಸ್ಟ್ರಕ್ಷನ್ ಸಂಸ್ಥೆ ಮೊದಲಾದವರಿಗೆ ನೊಟೀಸ್ ಜಾರಿ ಮಾಡಿತ್ತು. ನೋಟೀಸ್ ನಂತರವೂ ನಿಯಮಾವಳಿಗಳ ಉಲ್ಲಂಘನೆ ಎಗ್ಗಿಲ್ಲದೆ ಮುಂದುವರೆದಿದೆ ಎಂದು ಆರೋಪಿಸಲಾಗಿ, ಪರಿಶಿಷ್ಟ ಪಂಗಡ ನಿವಾಸಿಗಳು ಬೀದಿಗಿಳಿದು ತಮ್ಮ ಸಾಂಪ್ರದಾಯಿಕ ಪರಿಕರ ‘ಗುಮ್ಮಟೆ ಚಳುವಳಿ’ ಮೂಲಕ ಪ್ರತಿಭಟಿಸಿದ್ದರು.
ಇದು ಮಾತ್ರವಲ್ಲದೆ ತಹಶೀಲ್ದಾರರು, ಜಿಧಿಕಾರಿ, ಜನಪ್ರತಿನಿಧಿಗಳು, ಮತ್ತು ವಿವಿಧ ಇಲಾಖೆಗಳ ಮುಂದೆ ಗುಮ್ಮಟೆ ಚಳುವಳಿ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಇದೀಗ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಜಿಧಿಕಾರಿ ಮತ್ತು ಅರಣ್ಯ ಆಯುಕ್ತರಿಗೆ ನೋಟೀಸ್ ಜಾರಿಗೊಳಿಸಿದ್ದು ಪ್ರಕರಣದ ಕುರಿತಾದ ವಿಸ್ತೃತ ವರದಿ ಕೇಳಿದೆ. ಆಯೋಗವು ಭಾರತೀಯ ಸಂವಿಧಾನದ ಕಲಂ ೩೩೮ಅ ಅಡಿಯಲ್ಲಿ ನೀಡಿರುವ ಅಧಿಕಾರದಂತೆ ಈ ವಿಷಯವನ್ನು ವಿಚಾರಿಸಲು ನಿರ್ಧರಿಸಿದ್ದು ಈ ಸಂಬಂಧ ಸಾರ್ವಜನಿಕರು, ಪರಿಶಿಷ್ಟ ಪಂಗಡ ನಿವಾಸಿಗಳು ನೀಡಿರುವ ದೂರಿನನ್ವಯ ಕೈಗೊಂಡಿರುವ ಕ್ರಮಗಳ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ನೋಟಿಸ್ ಸ್ವೀಕರಿಸಿದ ದಿನಾಂಕದಿಂದ ೧೫ ದಿನಗಳೊಳಗೆ ವರದಿ ಸಲ್ಲಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಉತ್ತರ ಸಿಗದಿದ್ದಲ್ಲಿ, ಭಾರತೀಯ ಸಂವಿಧಾನದ ಕಲಂ ೩೩೮ಅ ಉಪಖಂಡ (೮) ಅಡಿಯಲ್ಲಿ ನಾಗರಿಕ ನ್ಯಾಯಾಲಯಕ್ಕೆ ನೀಡಿರುವ ಅಧಿಕಾರಗಳನ್ನು ಬಳಸಿ ಸಮನ್ಸ ನೀಡುವ ಎಚ್ಚರಿಕೆಯನ್ನೂ ಆಯೋಗ ನೀಡಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ನಿರ್ದೇಶಕ ಡಾ. ಪಿ ಕಲ್ಯಾಣರೆಡ್ಡಿ ವರದಿ ಕೇಳಿ ನೋಟೀಸ್ ಜಾರಿಗೊಳಿಸಿzರೆ.








