ಕೊಯ್ಯೂರು ಸಿಡಿಮದ್ದು ಸ್ಫೋಟಗೊಂಡು ಬಾಲಕನಿಗೆ ಗಂಭೀರ ಗಾಯ; ಕಾಡು ಪ್ರಾಣಿ ಬೇಟೆಗೆ ಬಳಸಿರುವ ಸ್ಫೋಟಕ ಎಂಬ ಶಂಕೆ

0

ಬೆಳ್ತಂಗಡಿ : ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಸ್ಫೋಟಕವೊಂದು ಸ್ಫೋಟಗೊಂಡು ಬಾಲಕ ಗಾಯಗೊಂಡು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾರು ಗ್ರಾಮದ ಬೈಪಾಡಿಯಲ್ಲಿ ಫೆ.18 ರಂದು ಬುಧವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬೈಪಾಡಿ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಎಂಬಾತನೇ ಅವಘಡದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಬಾಲಕ. ಅಂಗಳದಲ್ಲಿ ಮಕ್ಕಳಿಬ್ಬರು ಆಟವಾಡುತ್ತಿದ್ದ ವೇಳೆ ಪತ್ತೆಯಾದ ಚೆಂಡಿನಂಥ ವಸ್ತುವೊಂದನ್ನು ಹೆಕ್ಕಿಕೊಂಡು ಬಂದ ಬಾಲಕರಿಬ್ಬರು ಕ್ರಿಕೆಟ್ ಆಟವಾಡಿದ್ದಾರೆ ಏನೂ ಅರಿಯದ ಮುಗ್ಧ ಮಕ್ಕಳು.

ಕಾಡು ಪ್ರಾಣಿ ಬೇಟೆಗೆ ಬಳಸಿರುವ ಸ್ಫೋಟಕ ಎಂಬ ಶಂಕೆಯನ್ನು ಮನೆಯವರು ವ್ಯಕ್ತಪಡಿಸಿದ್ದಾರೆ, ತೋಟದಲ್ಲಿ ಇದ್ದ ಸ್ಫೋಟಕವನ್ನು ನಾಯಿ ಮನೆಯ ಅಂಗಳಕ್ಕೆ ತಂದಿರಬಹುದು ಅದು ಚೆಂಡಿನ ಆಕಾರದಲ್ಲಿ ಇದ್ದು ಮಕ್ಕಳು ಕ್ರಿಕೆಟ್ ಆಟಕ್ಕೆ ಬಳಸಿದ್ದು ಆಟವಾಡುವ ವೇಳೆ ಸ್ಫೋಟವಾಗಿದೆ.

ಓರ್ವನ ಕಾಲಿನ ಭಾಗಕ್ಕೆ ಗಾಯವಾಗಿದ್ದು ತಕ್ಷಣ ಬೆಳ್ತಂಗಡಿ ಸರ್ಕಾರಿ ಆಷ್ಪತ್ರೆಗೆ ದಾಖಲಿಸಿದ್ದಾರೆ. ಸಣ್ಣಪುಟ್ಟ‌ ಗಾಯದಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಸ್ಫೋಟಕ ಇಟ್ಟವರ ವಿರುದ್ಧ ಕ್ರಮಕೈಗೊಳ್ಳಲು ಮನೆಯವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here