ಟಿಪ್ಪರ್ ನಲ್ಲಿ ಮಕ್ಕಳನ್ನು ಕರೆದೊಯ್ದ ಪ್ರಕರಣ: ಅಮಾನತು ಆದ ಶಿಕ್ಷಕ ಕಿರಣ್ ಕುಮಾರ್ ಕೊರಂಜ ಶಾಲೆಗೆ ವರ್ಗಾವಣೆ

0

ಬೆಳ್ತಂಗಡಿ: ಬಳಂಜ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯು ಮಕ್ಕಳನ್ನು ಫೆ.09ರಂದು ಟಿಪ್ಪರ್‌ ಹಾಗೂ ಪಿಕಪ್‌ ವಾಹನದಲ್ಲಿ ಹೊರ ಸಂಚಾರಕ್ಕೆ ಕರೆದುಕೊಂಡು ಹೋಗಿದ್ದ ಹಿನ್ನೆಲೆ, ಫೆ.12ರಂದು ಡಿಡಿಪಿಐ ಶಶಿಧರ್‌ ರವರು ಬಳಂಜ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕಿರಣ್‌ ಕುಮಾರ್‌ ರವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

ಇದೀಗ ಫೆ.18ರಂದು, ಅಮಾನತುಗೊಂಡಿದ್ದ ಕಿರಣ್‌ ಕುಮಾರ್‌ರವರನ್ನು ಕಳಿಯ ಗ್ರಾಮದ ಕೊರಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನಾಗಿ ನೇಮಕ ಮಾಡಿ ಡಿಡಿಪಿಐ ಶಶಿಧರ್‌ ರವರು ಆದೇಶ ಹೊರಡಿದ್ದಾರೆ.

LEAVE A REPLY

Please enter your comment!
Please enter your name here