







ಬೆಳ್ತಂಗಡಿ : ಫೆ 21 ನೇ ಶನಿವಾರ ರಾತ್ರಿ ಗಂಟೆ 10:30ಕ್ಕೆ ಬೆಳ್ತಂಗಡಿಯ ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪಯುಕ್ತ ಗಯಾಪದ ಕಲಾವಿದೆರ್ ಉಬಾರ್ ಇವರ ಅಭಿನಯದ ಕಿಶೋರ್ ಜೋಗಿ ಉಬಾರ್ ರವರ ಸಂಚಾಲಕತ್ವದಲ್ಲಿ ಚಾರಿತ್ರಿಕ, ವಿಭಿನ್ನ ರಂಗ ಸಜ್ಜಿಕೆಯ ತುಳುನಾಡ ಕಲಾ ತಪಸ್ವಿ, ಕಲಾ ಮಾಣಿಕ್ಯ ಶ್ರೀ ರವಿಶಂಕರ ಶಾಸ್ತ್ರಿ ಮಣಿಲ, ಪುಣಚ ಇವರ ಕಲ್ಪನೆಯಲ್ಲಿ ಮೂಡಿಬಂದ ಚಾರಿತ್ರಿಕ, ಪೌರಾಣಿಕ ತುಳುನಾಟಕ ನಿರ್ದೇಶಿಸಿ ಅಭಿನಯಿಸಿರುವ” ನಾಗ ಮಾಣಿಕ್ಯ “ಸಂಗೀತ ಮಾಂತ್ರಿಕ ಶ್ರೀ ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ಸಂಗೀತದೊಂದಿಗೆ ಶ್ರೀ ರಾಜೇಶ್ ಶಾಂತಿನಗರ, ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ವಿಶಿಷ್ಟ ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ, ಲಿತು ಸೌಂಡ್ಸ್ ಮತ್ತು ಲೈಟ್ಸ್ ಶಾಂತಿನಗರ ಇದರ ಕೃಷ್ಣ ಮುಂಡ್ಯ, ಸುಕೇಶ್ ವರ್ಕಾಡಿ ಮತ್ತು ಸಿದ್ದು ಬೆದ್ರ ಇವರ ಕೈ ಚಳಕ, ಪ್ರದೀಪ್ ಕಾವು ಇವರ ಉತ್ತಮ ರೀತಿಯ ಮುಖವರ್ಣಿಕೆಯೊಂದಿಗೆ ಗುಣಕರ ಅಗ್ನಾಡಿಯವರ ನಿರ್ವಹಣೆಯೊಂದಿಗೆ ಮೂಡಿಬರಲಿದೆ.



ಕಲಾವಿದರುಗಳಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ ಸುರ್ಯ, ಸತೀಶ್ ಶೆಟ್ಟಿ ಹೆನ್ನಾಳ, ಬಿ ಜಗದೀಶ್ ಶಿಬರ, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ , ವಿ. ಆರ್. ಅನುಷಾ ಜೋಗಿ ಪುರುಷರಕಟ್ಟೆ, ಕು.ಸಂಧ್ಯಾಶ್ರೀ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್ ಆರ್ ಪುತ್ತೂರು, ಅನೀಶ್ ಉಬಾರ್, ಎ.ಯನ್ ಕೊಳಂಬೆ ರಾಮಕುಂಜ ಭರತ್ ಕುಮಾರ್ ಶಾಂತಿನಗರ,ಮಾ| ಲಿತಿನ್ ಶಾಂತಿನಗರ, ಮಾ| ಮನ್ವಿತ್ ಬೆಳ್ಳಿಪ್ಪಾಡಿ , ಕು|ಹೃತಿಕ ಬೆಳ್ಳಿಪ್ಪಾಡಿ, ಕು| ಪ್ರಣಿತಾ. ಬಿ ಶಾಂತಿನಗರ ಇವರು ಅಭಿನಯಿಸುವರು. ನಾಟಕದ ತಾಂತ್ರಿಕ ವರ್ಗದಲ್ಲಿ ಶ್ರೀ ವಿಜಯ್ ಶಾಂತಿನಗರ, ಶ್ರೀ ಭರತ್ ಶಾಂತಿನಗರ, ಶ್ರೀ ಹರ್ಷ ಇವರುಗಳ ಕೈ ಚಳಕ ರಂಗ ವಿನ್ಯಾಸದಲ್ಲಿ ಕಲಾಭಿಮಾನಿಗಳ ಮನಸೂರೆ ಗೊಳ್ಳುವಂತೆ ನಿರ್ವಹಿಸಲಿದ್ದಾರೆ ಎಂದು ತಂಡದ ಪ್ರಕಟಣೆ ತಿಳಿಸಿದೆ.ನಾಟಕ ಬುಕ್ಕಿಂಗ್ ಮಾಡಲು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ 9902543273,9008136330








