ಮಾರ್ಚ್ 3 ಚಂದ್ರಗ್ರಹಣ; ಧರ್ಮಸ್ಥಳ ಮಂಜುನಾಥನ ದರ್ಶನ ಸಮಯದಲ್ಲಿ ಬದಲಾವಣೆ

0

ಧರ್ಮಸ್ಥಳ: ಮುಂಬರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಾರ್ಚ್ 3, 2026ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ದರ್ಶನ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಿಸಿದೆ.

ಮಾರ್ಚ್ 3, ಮಂಗಳವಾರ ಚಂದ್ರಗ್ರಹಣ ಇರುವುದರಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಈ ಕೆಳಗಿನಂತೆ ಸಮಯ ನಿಗದಿಪಡಿಸಲಾಗಿದೆ:ಮಧ್ಯಾಹ್ನ 1:30 ರವರೆಗೆ ಮಾತ್ರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ.ಮಧ್ಯಾಹ್ನ 1:30 ರ ನಂತರ ಗ್ರಹಣದ ಪ್ರಯುಕ್ತ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.ರಾತ್ರಿ 7:30 ರ ನಂತರ: ಗ್ರಹಣ ಮುಕ್ತಾಯದ ನಂತರ ದೇವಸ್ಥಾನದ ಶುದ್ಧೀಕರಣ ಹಾಗೂ ಧಾರ್ಮಿಕ ವಿಧಿವಿಧಾನಗಳು ಮುಗಿದ ಬಳಿಕ ದರ್ಶನ ಪುನಾರಂಭವಾಗಲಿದೆ.

ಚಂದ್ರಗ್ರಹಣದ ಸಮಯ:ದೇವಸ್ಥಾನದ ಪ್ರಕಟಣೆಯ ಪ್ರಕಾರ ಗ್ರಹಣದ ಕಾಲಾವಧಿ ಹೀಗಿದೆ:ಗ್ರಹಣ ಪ್ರಾರಂಭ: ಮಧ್ಯಾಹ್ನ 3:19 ಗಂಟೆಗೆ.ಗ್ರಹಣ ಅಂತ್ಯ: ಸಂಜೆ 6:48 ಗಂಟೆಗೆ

ಭಕ್ತಾದಿಗಳಿಗೆ ಮನವಿ:ದೂರದ ಊರುಗಳಿಂದ ಬರುವ ಭಕ್ತಾದಿಗಳು ಸಮಯದ ಬದಲಾವಣೆಯನ್ನು ಗಮನಿಸಿ, ಕ್ಷೇತ್ರಕ್ಕೆ ಭೇಟಿ ನೀಡುವಂತೆ ಹಾಗೂ ಆಡಳಿತ ಮಂಡಳಿಯೊಂದಿಗೆ ಸಹಕರಿಸುವಂತೆ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ

LEAVE A REPLY

Please enter your comment!
Please enter your name here