ಬೆಳ್ತಂಗಡಿ ಜಮೀಯ್ಯತ್ತುಲ್ ಫಲಾಹ್ ಘಟಕದ ವತಿಯಿಂದ ರಂಝಾನ್ ಕಿಟ್ ವಿತರಣೆ

0

ಬೆಳ್ತಂಗಡಿ ಇಲ್ಲಿಯ ಜಮೀಯ್ಯತುಲ್ ಫಲಾಹ್ ಘಟಕದ ವತಿಯಿಂದ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ ಘಟಕದ ಅಧ್ಯಕ್ಷರಾದ ಖಾಲಿದ್ ಪುಲಾಭೆಯವರ ಅಧ್ಯಕ್ಷತೆಯಲ್ಲಿ ಪೆ 18 ರಂದು ಬೆಳ್ತಂಗಡಿ ಘಟಕದ ಕಛೇರಿಯಲ್ಲಿ ಜರಗಿತು.ಘಟಕದ ಅಧ್ಯಕ್ಷರಾದ ಖಾಲಿದ್ ಪುಲಾಭೆಯವರು ಕಿಟ್ ವಿತರಿಸಿ ಮಾತನಾಡಿ ನಮ್ಮೂರಿನ ವಿದೇಶದಲ್ಲಿ ದುಡಿಯುತ್ತಿರುವ ಅನಿವಾಸಿ ಭಾರತೀಯರಾದ ನಮ್ಮ ಯುವಕರು ಕಷ್ಟ ಪಟ್ಟು ದುಡಿದ ಸಂಪತ್ತಿನ ಒಂದು ಪಾಲು ಇಸ್ಲಾಮಿನ ನಿಯಮದಂತೆ ಸೇಕರಿಸಿಟ್ಟು ಅತೀ ಹಿಂದುಳಿದ ಕುಟುಂಬವನ್ನು ಗುರುತಿಸಿ ರಂಝಾನ್ ತಿಂಗಳಲ್ಲಿ ವಿತರಿ‌ಸುತ್ತಿದ್ದಾರೆ ಇದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಘಟಕದ ಸದಸ್ಯರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಹಾಫಿಲ್ ಮುಈನುದ್ದೀನ್ ಅಮ್ಜದಿ ಮದ್ದಡ್ಕ ಉಸ್ತಾದರು ದುಆ ನೆರವೇರಿಸಿದರು. ಗೌರವ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಸ್ಲಿಂ ಸಮುದಾಯದಲ್ಲಿ ನಮಾಝ್ ಎಷ್ಟು ಮುಖ್ಯವೋ ಅಲ್ಲಾಹು ನಮಗೆ ನೀಡಿದ ಸಂಪತ್ತಿನಿಂದ ಝಕಾತ್ ನೀಡುವುದು ಸಹಾ ಅಷ್ಟೇ ಮುಖ್ಯ ಎಂದರು. ಕಾರ್ಯದರ್ಶಿ ಉಮ್ಮರ್ ಬೆಳ್ತಂಗಡಿ, ಕೋಶಾದಿಕಾರಿ ಇಬ್ರಾಹಿಂ ಮುಸ್ಲಿಯಾರ್, ಮಾಜಿ ಅಧ್ಯಕ್ಷರುಗಳಾದ ಹಾಜಿ ಶೇಕುಂಞ, ಆಲಿಯಬ್ಬ ಪುಲಾಬೆ, ಹಾಜಿ ಉಮ್ಮರ್ ಕುಂಞಿ ನಾಡ್ಜೆ , ಅಬ್ಬೋನು ಮದ್ದಡ್ಕ , ಕಾಸಿಂ ಮಲ್ಲಿಗೆ ಮನೆ, ಹಾಜಿ ಯು ಹೆಚ್ ಮುಹಮ್ಮದ್, ಸೇರಿದಂತೆ ಸದಸ್ಯರುಗಳಾದ ಕೆ ಎಸ್ ಅಬ್ದುಲ್ಲಾ ಕರಾಯ, ಕೆ ಎಸ್ ಅಬೂಬಕ್ಕರ್ ಕಾಶಿಪಟ್ನ , ಹಕೀಂ ಸುನ್ನತ್ ಕೆರೆ, ಅಬ್ಬಾಸ್ ಸುನ್ನತ್ ಕೆರೆ ಇನ್ನೊರ್ವ ಮಾಜಿ ಅಧ್ಯಕ್ಷ ಹಬೀಬ್ ಸಾಹೇಬ್ ಮಂಜೊಟ್ಟಿ , ಹಾಗೂ ಹಸನಬ್ಬ ಮದ್ದಡ್ಕ ಉಪಸ್ತಿತರಿದ್ದರು. ಕಾರ್ಯದರ್ಶಿ ಉಮ್ಮರ್ ಬೆಳ್ತಂಗಡಿ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here