ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ವಿಜ್ರಂಭಣೆಯ ಮಹಾ ಶಿವರಾತ್ರಿ ಉತ್ಸವ ಆಚರಣೆ

0

ಬಂಗಾಡಿ: ಸಿಮೇಯ ಇತಿಹಾಸ ಪ್ರಸಿದ್ಧ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವವು ಫೆ 15 ರಂದು ಬೆಳಿಗ್ಗೆ 5.00 ಗಂಟೆಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಆನಂದ ಭಟ್ ರವರು ದೀಪ ಪ್ರಜ್ವಲಿಸಿ ಮಾರ್ಗದರ್ಶಕರಾದ ಡಾಕ್ಟರ್ ಪ್ರದೀಪ್ ಎ ರವರು ಶಿವ ಸಹಸ್ರನಾಮ ವನ್ನು ಭಕ್ತಾದಿಗಳು ಪಠಿಸಿದರು.

ಬೆಳಿಗ್ಗೆ 6.00 ಗಂಟೆಗೆ ಯಾಮದ ಪೂಜೆಯೊಂದಿಗೆ ಉತ್ಸವವು ಆರಂಭವಾಗಿ ಶ್ರೀ ಅರ್ಧನಾರೀಶ್ವರ ಸ್ವಾಮಿಗೆ ಒಟ್ಟು 9 ಯಾಮದ ಪೂಜೆ, ರುದ್ರ ಪಠಣ ದೊಂದಿಗೆ ಶತರುದ್ರಾಭಿಷೇಕ, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ ಇಂದಬೆಟ್ಟು, ನಾವೂರು, ನಡ ಕನ್ಯಾಡಿ, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ ಗ್ರಾಮದಿಂದ ಹಾಗೂ ತಾಲೂಕಿನ ವಿವಿಧ ಭಾಗದ ಭಕ್ತರಿಂದ ಶಿವನಾಮ ಸಂಕೀರ್ತನೆ ಯೊಂದಿಗೆ ಕ್ಷೇತ್ರಕ್ಕೆ ಪಾದಯಾತ್ರೆ, ವಿವಿಧ ಭಜನಾ ತಂಡಗಳಿಂದ ಭಕ್ತಿ ಗಾಯನ ಕಮ್ಮಟ ಭಜನೆ, ರಂಗಪೂಜೆ, ಉಪಹಾರ ಹಾಗೂ ಭಕ್ತರಿಂದ ಪ್ರಾತಃ ಕಾಲದ ಯಾಮದ ಪೂಜೆ ವರೆಗೆ ಜಾಗರಣೆ ನಡೆದು ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿಂದ ನಡೆದು ಮಹಾ ಶಿವರಾತ್ರಿ ಉತ್ಸವವು ಸಂಪನ್ನಗೊಂಡಿತು.

ಈ ಕಾರ್ಯಕ್ರಮದಲ್ಲಿ ಕಮ್ಮಟ ಭಜನೆ ದೀಪ ಪ್ರಜ್ವಲನ ವನ್ನು ಗ್ರಾಮದ ಹಿರಿಯರು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೆ. ಗಂಗಾಧರ ಗೌಡ ನೆರವೇರಿಸಿದರು, ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ದಂಪತಿಗಳು, ಮಾರ್ಗದರ್ಶಕರಾದ ಡಾಕ್ಟರ್ ಪ್ರದೀಪ್ ಎ ರವರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್. ಲಕ್ಷ್ಮಣ ಗೌಡ, ಸಮಿತಿಯ ಪದಾಧಿಕಾರಿಗಳು, ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಇಂದಬೆಟ್ಟು ಗುತ್ತುವಿನ ಅಜಿತ್ ಕುಮಾರ್ ಜೈನ್, ಊರಿನ ಗಣ್ಯರು, ಹಿರಿಯರು ಕಿರಿಯರು ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ಅರ್ಧನಾರೀಶ್ವರ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾದರು.

LEAVE A REPLY

Please enter your comment!
Please enter your name here