ಫೆ.7-8: ಪುದುವೆಟ್ಟು ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

0

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮಿಯ್ಯಾರು ತ್ರಿ ವನದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ’ من ಸತ್ಯನಾರಾಯಣ ಪೂಜೆ ಮತ್ತು ರಂಗಪೂಜೆ ಫೆ.7 ಮತ್ತು 8ರಂದು ನಡೆಯಲಿದೆ.ಫೆ.7ರಂದು ಬೆಳಿಗ್ಗೆ 8ರಿಂದ ಹೊರಕಾಣಿಕೆ ಸಮರ್ಪಣೆ, ಶ್ರೀ * ಸತ್ಯನಾರಾಯಣ ಪೂಜೆ ಆರಂಭ, ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಶ್ರೀ ವನದುರ್ಗಾ ದೇವಿಯ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ಹಿಪ್-ಬಾಯ್ ನೃತ್ಯ ತಂಡ ಉಜಿರೆ ಇವರಿಂದ ನೃತ್ಯ ಕಾರ್ಯಕ್ರಮ, ರಾತ್ರಿ 7 ರಿಂದ ರಾತ್ರಿ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 9 ರಿಂದ ಅಪ್ಪೆ ಭ್ರಾಹ್ಮರಿ ನಾಟಕ ನಡೆಯಲಿದೆ.ಸುದ್ದಿಬಿಡುಗಡೆಫೆ.7 ರಂದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಲಘು ಉಪಾಹಾರ, ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ, ಧಾರ್ಮಿಕ ಸಭೆಯ ಪ್ರವಚನವನ್ನು ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಭಟ್ ಗಬಲಡ್ಕ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬೊಮ್ಮಣ್ಣ ಗೌಡ ಮಠ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಶ್ರೀ ಸೌತಡ್ಕ ಮಹಾಗಣಪತಿ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಬೆಳ್ತಂಗಡಿ ತಾಲೂಕು ಸೇವಾ ಭಾರತಿ ಅಧ್ಯಕ್ಷ ಸ್ವರ್ಣ ಗೌರಿ, ಧಾರ್ಮಿಕ ಮುಖಂಡ ಅಧ್ಯಕ್ಷ ಕಿರಣ್ ಚಂದ್ರ ಪುಷ್ಪಗಿರಿ, ಉದ್ಯಮಿ ನಾಗೇಶ್ ಗೌಡ, ಧರ್ಮಸ್ಥಳ ಪ್ಯಾಕ್ಸ್ ಅಧ್ಯಕ್ಷ ಪ್ರೀತಂ ಡಿ, ಮಿಯ್ಯಾರು ವನದುರ್ಗಾ ದೇವಸ್ಥಾನದ ಅಧ್ಯಕ್ಷ ರಮೇಶ್ ಪ್ರಭು, ಡೆವೆಲಪ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಶ್ರೀಪತಿ ಹೆಬ್ಬಾರ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಅಶೋಕ್‌ ನೆಕ್ಕರಾಜೆ, ವಾಣಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಯದುಪತಿ ಗೌಡ, ಉಪ ವಲಯ ಅರಣ್ಯಾಧಿಕಾರಿ ಎಂ.ಯತೀಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಮಿತಾ ಕೆ. ಪೂಜಾರಿ, ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಪೂರ್ಣಾಕ್ಷ, ಎಲ್ನೋಡು ವ್ಯವಸ್ಥಾಪನಾ ಸನಿತಿಯ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಗೌಡ ಉಪಸ್ಥಿತಿ ಇರಲಿದ್ದಾರೆ. ರಾತ್ರಿ 9ರಿಂದ ಭಜನಾ ಗುರುಗಳಾದ ನಾಗೇಶ್ ಬಿ ನೆರಿಯ ಇವರ ಸಾರಥ್ಯದಲ್ಲಿ ‘ಭಜನಾ ಕಮ್ಮಟೋತ್ಸವ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here