






ಕೊಯ್ಯೂರು: ಮಲೆಬೆಟ್ಟು ವನದುರ್ಗಾ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಫೆ.8 ರಿಂದ 12 ವರೆಗೆ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.ಫೆ.8 ರಂದು ಬೆಳಿಗ್ಗೆ 8 ರಿಂದ ಶ್ರೀ ದೇವತಾ ಪ್ರಾರ್ಥನೆ, ಶ್ರೀ ಗಣಯಾಗ, ತೋರಣ ಮುಹೂರ್ತ, ಶ್ರೀ ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ ಹಾಗೂ ನಾಗದೇವರ ಸನ್ನಿಧೀಯಲ್ಲಿ ಆಶ್ಲೇಷ ಬಲಿ, ಪ್ರಸನ್ನ ಪೂಜೆ ನಡೆಯಲಿದೆ.ರಾತ್ರಿ 6-30 ರಿಂದ ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ಯಕ್ಷಗಾನ ಕಲಾಸಂಘ ಅದೂರು ಪೆರಾಲ್ ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ- ಲಂಕಾದಹನ ನಡೆಯಲಿದೆ. ರಾತ್ರಿ 8-30 ರಿಂದ ಶ್ರೀ ರಂಗಪೂಜೆ, ಶ್ರೀ ದೇವಿ ಉತ್ಸವ, ನಿತ್ಯ ಬಲಿ ನಡೆಯಲಿದೆ.ಫೆ.9 ರಂದು ಬೆಳಿಗ್ಗೆ 9 ರಿಂದ ಶ್ರೀ ದೇವಿ ಉತ್ಸವ, ದರ್ಶನ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.



ರಾತ್ರಿ 7 ರಿಂದ ಶ್ರೀ ರಾಮ ಭಜನಾ ಮಂಡಳಿ ಮಲೆಬೆಟ್ಟು ಇವರ ನೇತೃತ್ವದಲ್ಲಿ ಭಜನಾ ಮಂಡಳಿಗಳಿಂದ ಕಮ್ಮಟ ಭಜನೋತ್ಸವ. ರಾತ್ರಿ 8.30 ರಿಂದ ರಂಗಪೂಜೆ, ಶ್ರೀ ದೇವಿ ಉತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.ಫೆ.10 ರಂದು ಕವಾಟ ಉದ್ಘಾಟನಾ, ಕಲಶಾಭಿಷೇಕ, ಪ್ರಸನ್ನ ಪೂಜೆ, ಚೂರ್ಣೋತ್ಸವ, ಬಟ್ಟಲು ಕಾಣಿಕೆ. ಮಧ್ಯಾಹ್ಮ 12.30 ರಿಂದ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ಕಳೆಂಜ ಮೂಲಸ್ಥಾನದಿಂದ ಭಂಡಾರದ ಆಗಮನ, ರಾತ್ರಿ 7 ರಿಂದ ಸ.ಉ.ಹಿ.ಪ್ರಾ. ಶಾಲೆ ಕೊಯ್ಯೂರು ಕಸಬಾ ಮಲೆಬೆಟ್ಟು ಇಲ್ಲಿಯ ವಿಧ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ, ಶ್ರೀ ದೇವಿಯ ಉತ್ಸವ, ಕೆರೆಕಟ್ಟೆ ಪೂಜೆ, ಅವಭೃತ, ಧ್ವಜಾವರೋಹಣ, ಪ್ರಸನ್ನ ಪೂಜೆ ನಡೆಯಲಿದೆ. ರಾತ್ರಿ 12.00 ರಿಂದ ಶ್ರೀ ಧರ್ಮದೈವ ವಾರಾಹಿ, ಶ್ರೀ ಧೂಮಾವತಿ ನೇಮೋತ್ಸವ, ಶ್ರೀ ಕೊಡಮಣಿತ್ತಾಯ ಸಹಿತ ಧರ್ಮದೈವಗಳ ನೇಮೋತ್ಸವ ನಡೆಯಲಿದೆ.ಫೆ.11 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಭಂಡಾರದ ನಿರ್ಗಮನ, ಸಂಪ್ರೋಕ್ಷಣೆ, ಪ್ರಸನ್ನ ಪೂಜೆ, ರಾತ್ರಿ 7 ರಿಂದ ಮೂಲಸ್ಥಾನ ಕಳೆಂಜ ಗುತ್ತು ದೈವಸ್ಥಾನದಲ್ಲಿ ಧರ್ಮದೈವ ವಾರಾಹಿ ನೇಮೋತ್ಸವ, ಕಲ್ಕುಡ, ಕಲ್ಲುರ್ಟಿ, ಗುಳಿಗ ನೇಮೋತ್ಸವ ನಡೆಯಲಿದೆ.ಫೆ.12 ರಂದು ಬೆಳಿಗ್ಗೆ 8 ರಿಂದ ಶ್ರೀ ಕಲಶಾಭಿಷೇಕ-ಕಳೆಂಜದಲ್ಲಿ, ಪ್ರಸನ್ನಪೂಜೆ, ಮಧ್ಯಾಹ್ನ ಸಂಕ್ರಮಣ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಮಲೆಬೆಟ್ಟು ವನದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ ಕಾಂತಾಜೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








