ಪಿಲಿಗೂಡು: ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೆಕ್ಕಿಲು ಶಾಖೆ ಉದ್ಘಾಟನೆ

0

ಪಿಲಿಗೂಡು: ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ನೆಕ್ಕಿಲು ಶಾಖೆ ಉದ್ಘಾಟನಾ ಕಾರ್ಯಕ್ರಮ ಚಂದ್ರ ನಿಲಯದಲ್ಲಿ ಫೆ.1 ರಂದು ಕಣಿಯೂರು ಗುತ್ತು, ಸ್ಥಾಪನ ಅಧ್ಯಕ್ಷೆ ರಾಜಶ್ರೀ ಎಸ್. ಹೆಗ್ಡೆ ದೀಪಾ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಣಿಯೂರು ಗುತ್ತು ಸುದರ್ಶನ್ ಹೆಗ್ಡೆ, ಕಣಿಯೂರು ಪಂಚಾಯತ್ ನ ಉಪಾಧ್ಯಕ್ಷೆ ಜಾನಕಿ, ಸಂಘದ ಅಧ್ಯಕ್ಷೆ ಚೈತ್ರಾ ಎಂ. ಜಿ, ಉಪಾಧ್ಯಕ್ಷೆ ಪ್ರೇಮ, ನಿರ್ದೇಶಕರು ಕುಸುಮಾವತಿ, ವೈಶಾಲಿ ಮತ್ತು ಸಂಘದ ಕಾರ್ಯದರ್ಶಿ ಭಾರತಿ ಹಾಗೂ ಚಂದ್ರ ನಿಲಯದ ಹೇಮಾವತಿ, ನಾರಾಯಣ ನಾಯ್ಕ್ ಮಾವಿನಕಟ್ಟೆ, ಶರತ್ ಕೊರಂಟಾಜೆ, ಅಕ್ಷಯ್ ಶೆಟ್ಟಿ ಅತ್ತಿಲ, ವಾಹನ ಚಾಲಕರು ಬಾಲಕೃಷ್ಣ ಕುರಿಯಾಡಿ ಹಾಗೂ ಹತ್ತಿರದ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಸ್ಥಳದ ಯಜಮಾನರಾದ ದಿನೇಶ್ ಗೌಡ, ಚಂದ್ರನಿಲಯ ಅಲೆಕ್ಕಿ,ಎಲ್ಲಾ ರೀತಿಯ ಉತ್ತಮ ವ್ಯವಸ್ಥೆಗಳನ್ನು ಮಾಡಿಕೊಟ್ಟು ಉತ್ತಮ ಸಹಕಾರ ನೀಡಿದ್ದಾರೆ.

ಸ್ಥಳೀಯರಾದ ಸಂಜೀವ ಗೌಡ, ಕುರಿಯಾಡಿ, ಹರೀಶ್ ಅಲೆಕ್ಕಿ,ಪ್ರಶಾಂತ್ ನೆಕ್ಕಿಲು, ಬಾಲಕೃಷ್ಣ ಅಲೆಕ್ಕಿ, ಸಂದೀಪ್ ನೆಕ್ಕಿಲು, ರಾಮಣ್ಣ ಅಲೆಕ್ಕಿ, ನಾರಾಯಣ ಕುಕ್ಕುಂಜ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಸಂಘದ ಸದಸ್ಯರಾದ ಕುಸುಮಾವತಿ ಕುರಿಯಾಡಿ, ಕುಸುಮಾವತಿ ಕುಕ್ಕುಂಜ,ಹೇಮಾವತಿ ಅಲೆಕ್ಕಿ, ಹೇಮಾವತಿ ಕುಕ್ಕುಂಜ, ವಾರಿಜಾ ಅಲೆಕ್ಕಿ, ಆಶಾ ಅಂಕರೊಟ್ಟು, ಶೀಲಾವತಿ ಕುರಿಯಾಡಿ, ಚೈತ್ರಾ ಕುರಿಯಾಡಿ ಶಾಖೆಯಲ್ಲೇ ಹಾಲು ಹಾಕುವುದರ ಮೂಲಕ ಉತ್ತಮ ಚಾಲನೆ ನೀಡಿದ್ದಾರೆ. ಚೈತ್ರ ಕಾರ್ಯಕ್ರಮದ ನಿರೂಪಣೆ, ಹಾಗೂ ಸ್ವಾಗತ ಮಾಡಿದರು. ಚೈತ್ರಾ, ಭಾರತಿ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here