










ಮುಂಡಾಜೆ: ಶ್ರೀ ರಾಮ ಭಜನಾ ಮಂಡಳಿ ಮೂಲಾರು, ಮುಂಡಾಜೆಯ ಮೂಲಾರು ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನಾ ದಿನದಂದು ತಂಡದ ಸಂಚಾಲಕ ಸಂಕೇತ್ ಆವರ ಮುಂದಾಳತ್ವದಲ್ಲಿ ಭಜನಾ ಗುರುಗಳಾದ ನಾಗೇಶ ಬಿ ನೆರಿಯ ಆವರ ಮಾರ್ಗದರ್ಶನದಲ್ಲಿ ಭಜನಾ ತರಬೇತಿ ಪ್ರಾರಂಭಗೊಂಡ ಶ್ರೀರಾಮ ಭಜನಾ ಮಂಡಳಿಯು ದಕ್ಷಿಣ ಕನ್ನಡ ಜಿಲ್ಲೆ ಅಲ್ಲದೆ ಹೊರ ಜಿಲ್ಲೆಗಳಲ್ಲೂ ಭಜನಾ ಸೇವೆಯನ್ನು ಮಾಡುತ್ತ ಬಂದಿದೆ. ರಾಮನಾಥಪುರ(ಹಾಸನ) ಜಿಲ್ಲೆಯಲ್ಲಿ ಭಜನಾ ಕಾರ್ಯಕ್ರಮದಲ್ಲಿ ಜ. 31ರಂದು ಶ್ರೀರಾಮ ಭಜನಾ ಮಂಡಳಿ ಮೂಲಾರು ಮುಂಡಾಜೆ ಭಾಗವಹಿಸುತ್ತಿದೆ.









