ದೊಂಡೋಲೆಯಲ್ಲಿ ಮಹಿಳೆಯರ ಶ್ರೀ ರಾಮ ಕುಣಿತ ಭಜನಾ ತಂಡದ ಉದ್ಘಾಟನೆ

0

ದೊಂಡೋಲೆ: ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕಾರ್ಯಗಳ ಬಗ್ಗೆ ಜನರ ಒಲವು ಹೆಚ್ಚುತ್ತಿದೆ. ಅದರಲ್ಲೂ ಭಜನೆ ಕಡೆಗೆ ಯುವ ಜನರ ಒಲವು ಸಾಗುತ್ತಿದೆ. ಈ ಮಧ್ಯೆ ಧರ್ಮಸ್ಥಳ ಗ್ರಾಮದ ದೊಂಡೋಲೆಯಲ್ಲಿ ಜ. 30ರಂದು ಮಹಿಳೆಯರ ಭಜನಾ ತಂಡದ ಉದ್ಘಾಟನೆ ಗೊಂಡಿದೆ. ಈ ಭಾಗದ ಮುಖಂಡರಾಗಿರುವ ಸೂರ್ಯ ನಾರಾಯಣ ರಾವ್ ದೊಂಡೋಲೆ ಮತ್ತು ಹಿರಿಯ ಆರೋಗ್ಯ ಸಂದರ್ಶಕಿ ವಸಂತಿ ಗೌಡ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ವಸಂತಿ ಗೌಡ, ಭಜನೆ ಮೂಲಕ ಒಗ್ಗಟ್ಟು ಸಾಧಿಸಬಹುದು. ಬೇರೆ ಬೇರೆ ಚರ್ಚೆಗಳನ್ನು ಮಾಡುವುದಕ್ಕಿಂತ. ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು. ಬಳಿಕ ಮಾತನಾಡಿದ, ಸೂರ್ಯ ನಾರಾಯಣ ರಾವ್, ಪಕ್ಕದ ಊರಿನಲ್ಲಿ ಭಜನೆ ಆರಂಭವಾಗುವಾಗ ನಮ್ಮ ಊರಿನಲ್ಲೂ ಭಜನೆ ನಡೆಯಬೇಕು ಎಂಬ ಹಂಬಲ ಇತ್ತು ಇದೀಗ ಆಸೆ ಈಡೇರಿಕೆಯಾಗಿದೆ. ದೊಂಡೋಲೆಯ ಭಜನೆಗೆ ಬಹು ದೊಡ್ಡ ಇತಿಹಾಸ ಇದೆ.

ಇದೀಗ ಕುಣಿತ ಭಜನೆ ಮೂಲಕ ಮತ್ತಷ್ಟು ಭಕ್ತಿಗೆ ದಾರಿ ದೊರಕಿದೆ ಎಂದರು. ಬಳಿಕ ಮಾತನಾಡಿದ ಭಜನಾ ತರಬೇತು ದಾರರು ನಾಗೇಶ್ ನೆರಿಯ, ತಂಡ ರಚಿಸಿ ಉದ್ಘಾಟನೆ ಮಾಡುವುದು ಮುಖ್ಯವಲ್ಲ. ಅದನ್ನು ಅತ್ಯುತ್ತಮ ರೀತಿಯಲ್ಲಿ ಭವಿಷ್ಯದಲ್ಲೂ ನಡೆಸಿಕೊಂಡು ಹೋಗುವುದು ಮುಖ್ಯ . ಯಾವುದೇ ಕಾರಣಕ್ಕೂ ಇದು ನಿಲ್ಲಬಾರದು ನಿರಂತವಾಗಿ ನಡೆಯಬೇಕು ಎಂದರು. ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ್ ಗೌಡ , ಭಜನಾ ಮಂಡಳಿಯ ಶ್ರೀ ಮಂಜುನಾಥಶ್ವರ ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಅಳಿಯೂರ್, ಭಜನಾ ಮಂಡಳಿಯ ಕಾರ್ಯದರ್ಶಿ, ಮನೋಹರ ಪೂಜಾರಿ , ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ವಲಯದ ಮೇಲ್ವಿಚಾರಕ ರವೀಂದ್ರ, ಕನ್ಯಾಡಿ ಒಕ್ಕೂಟದ ಅಧ್ಯಕ್ಷರು ರಾದೇಶ್ ಗೌಡ, ಕಲ್ಮoಜ ಕನ್ಯಾಡಿ ವಿಭಾಗ ದ ಸೇವಾಪ್ರತಿನಿಧಿ ಪ್ರಮೀಳಾ ನಿರೂಪಿಸಿದರು. ಮಮತಾ ಅವರು ಸ್ವಾಗತಿಸಿದರು. ಭಾರತಿ ಆವತಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here