






ಧರ್ಮಸ್ಥಳ: ಶ್ರೀ.ಧ.ಮ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಒಂದನೇ ತರಗತಿಯ ಮಕ್ಕಳಿಂದ ಮ್ಯಾಜಿಕ್ ಆಫ್ ಲಿಟಲ್ ಮೈಂಡ್ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸುದ್ದಿ ಬಿಡುಗಡೆ ಪತ್ರಿಕೆಯ ಪಿ.ಆರ್.ಒ ಮತ್ತು ಎಡಿಟೋರಿಯಲ್ ಕನ್ಸಲ್ಟೆಂಟ್ ಕೆ. ರಾಘವ ಶರ್ಮ ಅವರು ಅತಿಥಿಗಳಾಗಿ ಆಗಮಿಸಿದ್ದರು.


ಈ ಕಾರ್ಯಕ್ರಮದಲ್ಲಿ ಮಕ್ಕಳು ಆಂಗ್ಲ ಭಾಷೆಯಲ್ಲಿ ಕಿರು ಪ್ರಹಸನ, ನೃತ್ಯ ವಿವಿಧ ಪಾತ್ರ ಅಭಿನಯಗಳನ್ನು ಪ್ರದರ್ಶಿಸಿ ಅತಿಥಿಗಳ ಗಮನ ಸೆಳೆದರು. ಮೊಬೈಲ್ ಬಳಕೆಯ ಕಿರು ಪ್ರಹಸನ ಅತಿಥಿಗಳ ಗಮನ ಸೆಳೆದು, ಅವರು ಪೋಷಕರಿಗೆ,ಮಕ್ಕಳಿಗೆ ಮೊಬೈಲ್ ನಿಂದ ಆದಷ್ಟು ದೂರವಿರುವಂತೆ ತಿಳಿಸಿದರು. ಮಕ್ಕಳು ಹೊರಗಡೆ ಆಟ ಆಡುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢ ಗೊಳ್ಳುತ್ತಾರೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಗೀತಾ ಅತಿಥಿಗಳ ಪರಿಚಯ ಮಾಡಿ, ಅದ್ವಿತಿ ಮತ್ತು ಸಾತ್ವಿನಿ ಸ್ವಾಗತಿಸಿದರು. ಕಾರ್ಯಕ್ರಮವು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ ಅವರ ಮಾರ್ಗದರ್ಶನದೊಂದಿಗೆ ಮೂಡಿಬಂದು, ಮಕ್ಕಳ ಪೋಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಒಂದನೇ ತರಗತಿಯ ವಿದ್ಯಾರ್ಥಿಗಳಾದ ಅಲೆನ್ ನಿರೂಪಿಸಿ, ಯುವನ್ ಮತ್ತು ಸಾತ್ವಿಕ್ ವಂದಿಸಿದರು.









