ಗುರುವಾಯನಕೆರೆ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷರಾಗಿ ಸತ್ಯಪಾಲನ್ ನಾಯರ್, ಕಾರ್ಯದರ್ಶಿಯಾಗಿ ಮಾನ್ಯ ಆಯ್ಕೆ

0

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಗುರುವಾಯನಕೆರೆ ಇದರ ಕಾರ್ಯಕಾರಿ ಮಂಡಳಿಯ ಆಯ್ಕೆಯ ಬಗ್ಗೆ ಜ.24ರಂದು ಅಯ್ಯಪ್ಪ ಮಂದಿರ ಗುರುವಾಯನಕೆರೆಯಲ್ಲಿ ಸಭೆ ನಡೆಸಲಾಗಿ ನೂತನ‌ ಮಂಡಳಿಯ ಪದಾಧಿಕಾರಿಗಳ ಆಯ್ಕೆಯು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ರಾಜೇಂದ್ರ ನಾಯರ್ ಗುರುಸ್ವಾಮಿಗಳ ಸಮ್ಮುಖದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಸತ್ಯಪಾಲನ್ ನಾಯರ್, ಕಾರ್ಯದರ್ಶಿಯಾಗಿ ಮಾನ್ಯ, ಉಪಾಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಅಮರ್ಜಾಲು, ಕೋಶಾಧಿಕಾರಿಯಾಗಿ ಶ್ರೀ ಸಾಗರ್ ಆದೇಲು, ಜೊತೆ ಕಾರ್ಯದರ್ಶಿಯಾಗಿ ನವೀನ್ ಪೂಜಾರಿ ಮೈರಾರು ಹಾಗೂ ಕಾರ್ಯಕಾರಿ‌ ಮಂಡಳಿಯ ಸದಸ್ಯರನ್ನು ನೇಮಕ ಮಾಡಲಾಯಿತು. ಮಾಜಿ ಅಧ್ಯಕ್ಷ ಮೋಹನ್ ಕುಲಾಲ್, ಶಿವಾಜಿನಗರ ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here