ಬೆಳ್ತಂಗಡಿ: ಸಲೂನ್ ಸೇವೆಗಳ ಮೂಲ ದರ ನಿಗದಿ – 2026 ಫೆ.1ರಿಂದ ಜಾರಿ

0

ಬೆಳ್ತಂಗಡಿ: ಸವಿತಾ ಸಮಾಜ ಮತ್ತು ಭಂಡಾರಿ ಸಂಘ ಬೆಳ್ತಂಗಡಿ, ಸಲೂನ್ ಮಾಲೀಕರು ಸಭೆ ನಡೆಸಿ, ಸಲೂನ್ ಸೇವೆಗಳ ಮೂಲ ದರಗಳನ್ನು ಅಂತಿಮಗೊಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಸಲೂನ್ ಸೇವೆಗಳ ದರ ಹೆಚ್ಚಳವಾಗಿರಲಿಲ್ಲ. ವೆಚ್ಚಗಳ ಏರಿಕೆ, ನಿರ್ವಹಣಾ ಖರ್ಚು ಹಾಗೂ ಕಾರ್ಮಿಕ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಸಲೂನ್ ಮಾಲೀಕರು ಪರಸ್ಪರ ಚರ್ಚೆಯ ಮೂಲಕ ಹೊಸ ಮೂಲ ದರಗಳನ್ನು ನಿಗದಿಪಡಿಸಿದ್ದಾರೆ.

ಈ ಹೊಸ ದರಗಳು ಫೆ. 1ರಿಂದ ಬೆಳ್ತಂಗಡಿ ವ್ಯಾಪ್ತಿಯ ಎಲ್ಲಾ ಸಲೂನ್‌ಗಳಿಗೆ ಅನ್ವಯವಾಗಲಿವೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.ನಿಗದಿಪಡಿಸಲಾದ ಮೂಲ ದರಗಳು ಈ ಕೆಳಗಿನಂತಿವೆ:ಹೇರ್ ಕಟಿಂಗ್ – ₹120, ಮಕ್ಕಳ ಹೇರ್ ಕಟಿಂಗ್ – ₹100, ಕ್ಲೀನ್ ಶೇವಿಂಗ್ – ₹80, ಗಡ್ಡ ಸೆಟ್ಟಿಂಗ್ – ₹100, ಆಯಿಲ್ ಮಸಾಜ್ – ₹100, ಹೇರ್ ಕಲರ್ – ₹150 ಸಭೆಯಲ್ಲಿ ಮಾತನಾಡಿದ ಸಲೂನ್ ಮಾಲೀಕರು, ಈ ದರಗಳು ಗ್ರಾಹಕರಿಗೂ ಹಾಗೂ ಸಲೂನ್ ವೃತ್ತಿಯವರಿಗೆ ಸಮತೋಲನವಾಗಿರುವಂತೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಗ್ರಾಹಕರು ಸಹಕಾರ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here