






ಓಡಿಲ್ನಾಳ: ಸ. ಉ. ಪ್ರಾ ಶಾಲೆಯಲ್ಲಿ ಎಸ್. ಡಿ. ಎಂ. ಸಿ ಸಮಿತಿ ರಚನಾ ಕಾರ್ಯಕ್ರಮ ನಡೆಯಿತು. ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಿಕ್ಷಣ ಸಂಯೋಜಕ ಸಿದ್ದಲಿಂಗ ಸ್ವಾಮಿ ಅತಿಥಿಗಳಾಗಿ ಭಾಗವಹಿಸಿ ಇಲಾಖಾ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಪಂಚಾಯತ್ ಪ್ರತಿನಿಧಿ ಆನಂದಿ ಹಾಗೂ ಮುಖ್ಯ ಶಿಕ್ಷಕಿ ಉಷಾ.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನೂತನ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಮದ್ದಡ್ಕ ಹಾಗೂ ಉಪಾಧ್ಯಕ್ಷರಾಗಿ ನಸೀಮಾ ಅವರು ಪುನರಾಯ್ಕೆಯಾದರು. ಸದಸ್ಯರಾಗಿ ಮಹಮ್ಮದ್ ರಫೀಕ್, ಸತೀಶ್ ದೇವಾಡಿಗ, ವೆಂಕಪ್ಪಗೌಡ, ರಾಜೇಶ್ ಆಚಾರ್ಯ, ಸುರೇಶ್ ನಾಯ್ಕ, ಶಿವಪ್ರಸಾದ್ ಆಚಾರ್ಯ ಮತ್ತು ಝರೀನಾ, ಫಾತಿಮಾ, ಫರೀದಾ, ವಸಂತಿ, ಉಷಾ, ಮುಮ್ತಾಜ್, ಕಸ್ತೂರಿ ಪ್ರಭು, ಶೋಭಾ, ಆಶಾ ಆಯ್ಕೆಯಾದರು.
ವಿದ್ಯಾರ್ಥಿಗಳಾದ ಶೌಫ ಮರಿಯಂ ರಾಜಶ್ರೀ, ಆಪ್ತಿ ಪ್ರಾರ್ಥನೆಗೈದರು. ಶಿಕ್ಷಕಿ ನಯನಾ. ಟಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ವೃಂದದವರು ಮತ್ತು ಅಡಿಗೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಜಯರಾಜ ಜೈನ್ ಧನ್ಯವಾದ ಕೋರಿದರು.









