ಮುಂಡಾಜೆ-ಧರ್ಮಸ್ಥಳ ಅಗತ್ಯತೆಯ ಸಂಪರ್ಕ ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ.

0

ಬೆಳ್ತಂಗಡಿ: ಧರ್ಮಸ್ಥಳ-ಮುಂಡಾಜೆ-ದಿಡುಪೆ ರಾಜ್ಯ ಹೆದ್ದಾರಿ 276ರ ಕಲ್ಮಂಜ ಗ್ರಾಮದ ಕೊತ್ತಲಿಗೆ, ವಂಜರೆಬೈಲ್ ಮತ್ತು ಪಿಲತಡ್ಕ ಭಾಗಗಳಲ್ಲಿನ ಹಳೆಯ ಸೇತುವೆಗಳು ಕಿರಿದಾಗಿದ್ದು, ಕುಸಿತಕೊಳಗಾಗಿ ನಾದುರಸ್ತಿಯಲ್ಲಿದ್ದು ಅಪಾಯದ ಮಟ್ಟವನ್ನು ಮೀರಿತ್ತು ಇದರಿಂದಾಗಿ ದಿನನಿತ್ಯ ವಾಹನ ಸವಾರರ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀರಾ ಅಡಚಣೆಯಾಗುತ್ತಿರುವುದನ್ನು ಆ ಭಾಗದ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು ಪ್ರಮುಖ ಜಿಲ್ಲಾ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ ಲೆಕ್ಕ ಶೀರ್ಷಿಕೆಯಡಿ ಅನುದಾನವನ್ನು ಬಿಡುಗಡೆಗೊಳಿಸಲು ಶಾಸಕರು ವಿಶೇಷವಾಗಿ ಶ್ರಮ ವಹಿಸಿದರು.

ಹಾಗಾಗಿ ಸಾರ್ವಜನಿಕರ ಬಹುಕಾಲದ ಬೇಡಿಕೆಯ ತೀರಾ ಅಗತ್ಯತೆಯ ಸೇತುವೆಗಳ ಪುನರ್ ನಿರ್ಮಾಣ ಮಾಡುವ ಕಾರ್ಯವು ಈಗಾಗಲೇ ಕಾರ್ಯರಂಭಗೊಂಡಿದ್ದು ರೂ.3 ಕೋಟಿ 75ಲಕ್ಷ ವೆಚ್ಚದಲ್ಲಿ 3 ಭಾಗಗಳಲ್ಲಿ ನೂತನ ಸೇತುವೆಗಳು ನಿರ್ಮಾಣಗೊಳ್ಳಲಿದೆ. ಈ ಸೇತುವೆಯ ಬಗ್ಗೆ ಸುದ್ದಿ ಬಿಡುಗಡೆ ವರದಿಯನ್ನು ಮಾಡಿತ್ತು.

LEAVE A REPLY

Please enter your comment!
Please enter your name here