








ಉಜಿರೆ: ಶ್ರೀ ದುರ್ಗಾ ನಿಲಯದ ಸುನಂದಾ ಮತ್ತು ಯು. ಸದಾಶಿವ ಶೆಟ್ಟಿ, ಮಕ್ಕಳು ಮತ್ತು ಕುಟುಂಬಿಕರಿಂದ ಜ. 5ರಂದು ಶ್ರೀ ದುರ್ಗಾ ನಿಲಯದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಸಂಜೆ ಶ್ರೀ ಕಟೀಲು ಮೇಳದ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೆ” ಪೌರಾಣಿಕ ಪ್ರಸಂಗದ ಯಕ್ಷಗಾನ ಸೇವಾ ಬಯಲಾಟ ನಡೆಯಿತು. ಸಂಜೆ ಬೆಳ್ತಂಗಡಿ ಹಳೇಕೋಟೆ ಭಗವಾನ್ ಶಿರಡಿ ಸಾಯಿ ಸತ್ಯಸಾಯಿ ಸೇವಾ ಕ್ಷೇತ್ರದವರಿಂದ ಭಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಿತು. ಬೆಳ್ತಂಗಡಿ ಹಾಗೂ ಆಸುಪಾಸಿನ ಭಕ್ತಾದಿಗಳನ್ನು, ಗಣ್ಯರನ್ನು, ಯಕ್ಷಗಾನ ಕಲಾಭಿಮಾನಿಗಳನ್ನು ಮನೆಯವರ ಪರವಾಗಿ ರಮೇಶ್ ಶೆಟ್ಟಿ, ಉಮೇಶ ಶೆಟ್ಟಿ ಹಾಗೂ ಮನೆಯವರು ಸ್ವಾಗತಿಸಿದರು.









