






ವೇಣೂರು: ರೈತರ ನಿರಂತರ ಬೆಂಬಲದೊಂದಿಗೆ ಕ್ಯಾಂಪ್ಕೋ ಸಂಸ್ಥೆಯು ಉತ್ತಮ ಯಶಸ್ಸನ್ನು ಪಡೆಯುತ್ತಿದೆ. ಅದಕ್ಕಾಗಿ ಸೂಕ್ತ ಸಂದರ್ಭದಲ್ಲಿ ಕೃಷಿಕರ ಬೆನ್ನಿಗೆ ನಿಂತು ನಿಗದಿತ ಸಮಯದಲ್ಲಿ ಕೃಷಿ ಉತ್ಪನ್ನಗಳನ್ನು ಯೋಗ್ಯ ಬೆಲೆಗೆ ಖರೀದಿಸುವ ಮೂಲಕ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ನೋಡಿಕೊಂಡಿದೆ ಎಂದು ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ ಹೇಳಿದರು.


ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯ ದತ್ತ ಎಂಬ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ವೇಣೂರು ಶಾಖೆಯ ಸದಸ್ಯರಾದ ಜಗತ್ಪಾಲ್ ಮುದ್ಯ ಅವರ ವೈದ್ಯಕೀಯ ವೆಚ್ಚದ ಪರಿಹಾರವಾಗಿ ಮಂಜೂರಾದ ₹100000/- ಮೊತ್ತದ ಚೆಕ್‌ನ್ನು ಅವರ ಪತ್ನಿ ಕಮಲಾಜಿ ಮುದ್ಯ ಅವರಿಗೆ ಜ.8ರಂದು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ದಯಾನಂದ ಹೆಗ್ಡೆಯವರು ಫಲಾನುಭವಿಗೆ ಹಸ್ತಾಂತರಿಸಿದರು. ಕ್ಯಾಂಪ್ಕೋ ಬೈಕಂಪಾಡಿ ಪ್ರಾಂತ್ಯದ ಪ್ರಾದೇಶಿಕ ವ್ಯವಸ್ಥಾಪಕ ನಿತಿನ್ ಕೊಟ್ಯಾನ್ ಹಾಗೂ ವೇಣೂರು ಶಾಖೆಯ ವ್ಯವಸ್ಥಾಪಕ ಅನಿಶ್ ರಾಜ್ ಎಂ. ಉಪಸ್ಥಿತರಿದ್ದರು.









