






ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ, ಮಡಂತ್ಯಾರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ 2025-2026ನೇ ಸಾಲಿನ ರೋವರ್ಸ್ ರೇಂಜರ್ ಸಮಾಗಮ, ಸೈ ಸ್ಕೌಟ್ – ಗೈಡ್ಸ್ ಮೇಳದ ಧ್ವಜಾರೋಹಣವನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ರವರ ಅಧ್ಯಕ್ಷತೆಯಲ್ಲಿ ಸೇಕ್ರೆಡ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಸ್ವಾಮಿ ದೀಪಕ್ ಲಿಯೋ ಡೆ’ಸಾ, ರೋಟರಿ ಕ್ಲಬ್ ಮಡಂತ್ಯಾರಿನ ಅಧ್ಯಕ್ಷ ರೋ ಮೆಕ್ಸಿಂ ಅಲ್ಬುಕರ್ಕ್, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ ಮುಂತಾದವರ ಆತಿಥ್ಯದಲ್ಲಿ ಮಾಡಲಾಯಿತು.
ಬಳಿಕ ಅತಿಥಿವರೇಣ್ಯರ ಸಮ್ಮುಖದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈಯವರು ಬೆಂಕಿ ಬಳಸದೆ ಅಡುಗೆ ತಯಾರಿ, ಕರಕುಶಲವಸ್ತುಗಳ ತಯಾರಿ, ಬುಟ್ಟಿ-ಚಾಪೆ ತಯಾರಿ, ಗೀಟಿಂಗ್ ಕಾರ್ಡ್ ತಯಾರಿ.2026ನೇ ಸಾಲಿನ ಕ್ಯಾಲೆಂಡರ್ ತಯಾರಿ, ಗಾಳಿಪಟ ತಯಾರಿ ಮುಂತಾದ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸಿ, ಶುಭಹಾರೈಸಿದರು. ಮಡಂತ್ಯಾರು ಗ್ರಾಮ ಪಂಚಾಯತು ಉಪಾಧ್ಯಕ್ಷರಾದ ಗೋಪಾಲಕೃಷ್ಣರವರು ಕೈಗಾರಿಕಾ ಮತ್ತು ತಾಂತ್ರಿಕ ತರಬೇತು ಸಂಸ್ಥೆ (ಐ.ಟಿ.ಐ.) ವೇಣೂರು ಇಲ್ಲಿನ ರೋವರ್ಗಳಿಂದ ರಚಿಸಲ್ಪಟ್ಟ ವಿವಿಧ ಸಾಹಸಮಯ ಚಟುವಟಿಕೆಗಳ ಪ್ರೋಜೆಕ್ಟ್ಗಳನ್ನು ಉದ್ಘಾಟಿಸಿದರು.


ಅಪರಾಹ್ನ ರೋವರ್ಸ್ ರೇಂಜರ್ ಸಮಾಗಮ ಮತ್ತು ಗೈಡ್ಸ್ ಮೇಳದ ಉದ್ಘಾಟನೆಯನ್ನು ಮಾಡಿ, ಸೇಕ್ರೆಡ್ ಹಾರ್ಟ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸ್ವಾಮಿ ಡಾ| ಸ್ಪ್ಯಾನಿ ಗೋವಿಯಸ್ರವರು “ಎಳೆಯ ಪ್ರಾಯದಲ್ಲೇ ಮಕ್ಕಳಲ್ಲಿ ಶಿಸ್ತನ್ನು ಕಲಿಸುವ ಮೂಲಕ ಜೀವನವನ್ನು ಪಾವನಗೊಳಿಸುವ ಸ್ಕೌಟ್ ಗೈಡ್ ಸಂಸ್ಥೆಯ ಪಾತ್ರ ಮಹತ್ತರವಾದುದು” ಎಂದು ಹೇಳಿ ಶುಭಹಾರೈಸಿದರು. ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಸ್ವಾಮಿ ದೀಪಕ್ ಲಿಯೋ ಡೇಸಾ ರವರು ಸ್ಕೌಟ್ ಗೈಡ್ ನಲ್ಲಿ ಬದುಕುವ ರೀತಿ, ನೀತಿ, ಮಹತ್ವಗಳನ್ನು ತಿಳಿಸಲಾಗುತ್ತದೆ. ಆದ್ದರಿಂದ ಮಕ್ಕಳು ಸೈಟ್ ಗೈಡ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು.
ಸಂಸ್ಥೆಯ ಉಪಾಧ್ಯಕ್ಷ ಟಿ.ವಿ.ಶ್ರೀಧರ್ರಾವ್ ಪೇಜಾವರ ರವರು ಎಳವೆಯಲ್ಲಿ ಸಾಮಾನ್ಯ ಮಕ್ಕಳಂತೆ ಬೆಳೆದು ಬಂದ ಅಬ್ದುಲ್ ಕಲಾಂರವರಂತಹ ಅನೇಕ ಮಕ್ಕಳು ಅವಿರತ ಪರಿಶ್ರಮ, ಶಿಸ್ತು ಮತ್ತು ಛಲದಿಂದ ರಾಷ್ಟ್ರ ಮಟ್ಟದ ನಾಯಕರಾಗಿದ್ದಾರೆ. ಅವರಂತೆಯೇ ನಾವು ಕೂಡಾ ಉತ್ತಮ ಗುರಿಯತ್ತ ನಮ್ಮ ಗಮನ ಹರಿಸಬೇಕು ಎಂದು ಪ್ರೋತ್ಸಾಹಕ ಮಾತುಗಳನ್ನಾಡಿದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸ್ಕೌಟ್ – ಗೈಡ್ಸ್ನ ಧೈಯೋದ್ದೇಶ ಮತ್ತು ಸ್ಕೌಟ್ -ಗೈಡ್ಸ್ ಬೆಳೆದು ಬಂದ ದಾರಿಯನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳ ಸ್ಥಾನದಿಂದ ಮಡಂತ್ಯಾರು ಗ್ರಾಮ ಪಂಚಾಯತು ಅಧ್ಯಕ್ಷೆ ರೂಪಾ ನವೀನ್ರವರು ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅವಕಾಶ ಸಿಕ್ಕಿದಾಗ ವಿದ್ಯಾರ್ಥಿಗಳು ಅದರ ಪ್ರಯೋಜನವನ್ನು ಪಡೆಯಬೇಕು ಎಂದು ಹೇಳಿ ಶುಭಹಾರೈಸಿದರು.
ರ್ಯಾಲಿ ನಿರ್ದೇಶಕ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಸೈಟರ್ ಚಿದಾನಂದ ಎಚ್.ಡಬ್ಲ್ಯು.ಬಿ. (ಎಸ್) ಅವರು ಎರಡು ದಿನಗಳ ರ್ಯಾಲಿ ಮುನ್ನೋಟವನ್ನಿತ್ತರು. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ರುಕ್ಕಿಣಿ, ಸ್ಥಳೀಯ ಸಂಸ್ಥೆಯ ಎ.ಡಿ.ಸಿ. ದತ್ತಾತ್ರೇಯ ಗೊಲ್ಲ, ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಸುಜಾತಾ, ಪುಂಜಾಲಕಟ್ಟೆ ಸಮೂಹ ಸಂಪನ್ಮೂಲ ಕೇಂದ್ರದ ಸಿ.ಆರ್.ಪಿ ಚೇತನಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಡಂತ್ಯಾರು ಸೇ.ಹಾ.ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಎನ್ನಿ ಲೋಬೋ ರವರು ಸ್ವಾಗತಿಸಿ, ಗುರುವಾಯನಕೆರೆ ಪ್ರೌಢಶಾಲಾ ಸೈಟರ್ ಅಜಿತ್ ಕುಮಾರ್ ಎಚ್.ಡಬ್ಲ್ಯು.ಬಿ (ಎಸ್)ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಾಂತಾರಾಮ ಪ್ರಭು ಎ.ಎಲ್.ಟಿ.(ಎಸ್)ರವರು ಧನ್ಯವಾದ ಸಮರ್ಪನೆಗೈದರು.









