ಬಳ್ಳಮಂಜ: ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಶ್ರೀ ಈಶ್ವರ ದೇವರ ಗರ್ಭಗುಡಿಯ ಷಡಾಧಾರ ಪ್ರತಿಷ್ಠೆ

0

ಬಳ್ಳಮಂಜ: ಶ್ರೀ ಕ್ಷೇತ್ರ ಬಳ್ಳಮಂಜದ ಶಿಲಾಮಯ ಈಶ್ವರ ದೇವರ ಗರ್ಭಗೃಹ ಹಾಗೂ ತೀರ್ಥ ಮಂಟಪದ ನಿರ್ಮಾಣದ ನಿಧಿ ಕುಂಭ ಸ್ಥಾಪನೆ ಪೂರ್ವಕ ಷಡಾಧಾರ ಪ್ರತಿಷ್ಠೆ ಹಾಗೂ ಅಷ್ಟೇಷ್ಟಕ ಸ್ಥಾಪನೆ ಪೂರ್ವಕ ಗರ್ಭನ್ಯಾಸವು ಜ. 4ರಂದು ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಅನುವಂಶಿಯ ಆಡಳಿತ ಮೊಕ್ತೇಸರ ಡಾ. ಎಂ ಹರ್ಷ ಸಂಪಿಗೆತ್ತಾಯ ಧಾರ್ಮಿಕ ವಿಧಿಗಳಲ್ಲಿ ಭಾಗಿಯಾದರು. ಮಂಗಳೂರು ಶಿಲೆಶಿಲೆ ಮೊಕ್ತೇಸರ ಶ್ರೀ ಕ್ಷೇತ್ರ ಶರವು ಶ್ರೀ ಶರವು ರಾಘವೇಂದ್ರ ಶಾಸ್ತ್ರಿ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಗ್ಲೋಬಲ್ ಹೆಡ್ ಇನ್ಫೋಸಿಸ್ ಐ.ಟಿ ಉಪಾಧ್ಯಕ್ಷ ರಾಧಾಕೃಷ್ಣ ಎಸ್., ಕೃಷಿಕ ಪುರಂದರ ರೈ ಮಿತ್ರಂಪಾಡಿ ಪುತ್ತೂರು, ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಹಾಗೂ ಯೋಗೀಶ್ ಪೂಜಾರಿ ಕಡ್ತಿಲ ಉಪಸ್ಥಿತರಿದ್ದರು. ದೇವಾಲಯದ ಸಿಬ್ಬಂದಿ ವರ್ಗ, ಊರಿನ ಗಣ್ಯರು, ಕ್ಷೇತ್ರದ ಭಕ್ತಾದಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡರು.

LEAVE A REPLY

Please enter your comment!
Please enter your name here