






ವೇಣೂರು: ಗ್ರಾ.ಪಂ., ಬೆಳ್ತಂಗಡಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ, ವೇಣೂರು ಯುವ ಸೇವಾ ಸಂಗಮ ಸೇವಾ ಟ್ರಸ್ಟ್, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಹಾಗೂ ನಡ್ತಿಕಲ್ಲು ಶ್ರೀರಾಮ ಭಜನ ಮಂಡಳಿ ಅವರ ಸಹಯೋಗದಲ್ಲಿ ಕೇಂದ್ರ ಸರಕಾರದ ವಿಮಾ ಯೋಜನೆಗಳ ಚಿರ ನೂತನ ಜನಸುರಕ್ಷಾ ಅಭಿಯಾನವು ನಡ್ತಿಕಲ್ಲು ಶ್ರೀರಾಮ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.


ಶಾಸಕ ಹರೀಶ್ ಪೂಂಜ ಉದ್ಘಾಟಿಸಿ, ಕೇಂದ್ರ ಸರಕಾರದ ಜನೋಪಯೋಗಿ ಸಾಕಷ್ಟು ಯೋಜನೆ, ಸವಲತ್ತುಗಳಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಸಭೆಯಲ್ಲಿ ನಬಾರ್ಡ್ ನ ಜಿಲ್ಲಾ ಡಿಡಿಎಂ ಸಂಗೀತ ಕರ್ತ, ಅಮೂಲ್ಯ ಆರ್ಥಿಕ ಸಾಕ್ಷಾರತ ಕೇಂದ್ರ ಬೆಳ್ತಂಗಡಿಯ ಸಮಾಲೋಚಕಿ ಉಷಾ ನಾಯಕ್, ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು, ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ್ ಹೆಗ್ಡೆ ಬಿಇ, ಯುವಸೇವಾ ಸಂಗಮ ವೇಣೂರು ಅಧ್ಯಕ್ಷ ಕೆ. ವಿಜಯ ಗೌಡ, ಶ್ರೀ ಕ್ಷೇ ಧ.ಗ್ರಾ. ಯೋಜನೆಯ ವಲಯ ಮೇಲ್ವಿಚಾರಕಿ ಶಾಲಿನಿ, ಶ್ರೀ ರಾಮ ಭಜನಾ ಮಂಡಳಿಯ ಅಧ್ಯಕ್ಷ ಪ್ರವೀಣ್ ಆಚಾರ್ಯ, ಪಂಚಾಯತ್ ಸದಸ್ಯ ಹರೀಶ್ ಪಿ.ಎಸ್, ವೀಣಾ ದೇವಾಡಿಗ, ಪುಷ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮ ವ್ಯವಸ್ಥಾಪಕ ಪ್ರಕಾಶ್ ಪ್ರಮುಖರಾದ ರಾಜೇಶ್ ಮೂಡುಕೋಡಿ, ಪುರುಷೋತ್ತಮ ರಾವ್, ಪ್ರಕಾಶ ಭಟ್ ಪ್ರಕಾಶ್ ನಡ್ತಿಕಲ್ಲು ಜಲಜ ಹಾಗೂ ಇತರರು ಉಪಸ್ಥಿತರಿದ್ದರು.









