






ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಜ. 24ರಿಂದ 30ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಜ.7ರಂದು ಪ್ರಾತಃಕಾಲದಲ್ಲಿ ಧನು ಪೂಜೆ ಬಳಿಕ ನೆರವೇರಿತು.




ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರ ವೈದಿಕ, ವಿಧಿ ವಿಧಾನಗಳೊಂದಿಗೆ ವ್ಯವಸ್ಥಾಪನಾ ಸಮಿತಿ, ಭಕ್ತ ವೃಂದದವರು ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು. ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಹರೀಶ್ ಕುಮಾರ್, ಸದಸ್ಯರಾದ ಹರೀಶ್ ಗೌಡ ಕೆ, ನೀನಾ ಕುಮಾರ್, ಅರುಣ್ ಶೆಟ್ಟಿ, ಮೋಹಿನಿ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ. ಮೆದಿನ, ಕಳಿಯ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಕಾಂತ ನಿಡ್ದಾಜೆ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ., ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೇಶವ ಪೂಜಾರಿ, ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಡಾ. ಅನಂತ ಭಟ್, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಅಂಭಾ ಬಿ. ಆಳ್ವ, ದಿನೇಶ್ ಗೌಡ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷ ಗಣೇಶ ನಾಳ, ಶ್ರೀ ದುರ್ಗಾ ಮಾತೃ ಮಂಡಳಿ ಕಾರ್ಯದರ್ಶಿ ವಿನೋದ, ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಹೆಚ್., ಪ್ರಮುಖ ರಾದ ಪೂವಪ್ಪ ಶೆಟ್ಟಿ, ಉಮಾನಾಥ ಶೆಟ್ಟಿ, ವಿಜಯ ಗೌಡ ಕೆ, ಸುಧಾಕರ ಮಜಲು,ಸತೀಶ್ ಭಂಡಾರಿ ನಾಳ, ಮಹಾಲಕ್ಷ್ಮಿ, ವಿಕ್ರಮ್ ಜೆ. ಎನ್., ಜಗನ್ನಾಥ ವಂಜಾರೆ, ಗೋಪಾಲ ಮುದ್ದು0ಜ, ಸತೀಶ್ ಶೆಟ್ಟಿ, ಸದಾಶಿವ ಗಾಣಿಗ, ಕೆ. ಎನ್. ಗೌಡ, ಸೋಮಣ್ಣ ಗೌಡ, ಮೋಹನ ಗೌಡ, ಗಿರೀಶ್ ಶೆಟ್ಟಿ, ಜಾತ್ರಾ ಮಹೋತ್ಸವದ ವಿವಿಧ ಉಪ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅರ್ಚಕ ವೃಂದ, ದೇವಸ್ಥಾನದ ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ಊರ ಪರವೂರ ಭಕ್ತರು ಹಾಜರಿದ್ದರು.









