








ಕೊಕ್ಕಡ: ಶ್ರೀರಾಮ ಭಜನಾ ಮಂದಿರದ ಪಾಕಶಾಲೆ ಕಾಮಗಾರಿ ಭರದಿಂದ ಸಾಗಿದ್ದು ಈ ಹಿನ್ನೆಲೆಯಲ್ಲಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ರವರು 1ಲಕ್ಷ ರೂಪಾಯಿ ದೇಣಿಗೆ ನೀಡಿರುತ್ತಾರೆ. ಅವರ ತಂದೆ ದಿ. ಪುರುಷೋತ್ತಮ ನಾಯಕ್ ರವರು ಭಜನಾ ಮಂದಿರದ ಹಿರಿಯ ಸದಸ್ಯರು ಆಗಿದ್ದರು ಎಂಬುದನ್ನು ಭಜನಾ ಮಂದಿರದ ಸದಸ್ಯರು ನೆನಪಿಸುತ್ತಾರೆ. ದೇಣಿಗೆ ನೀಡುವ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಶ್ರೀ ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ನೈಮಿಷ, ವಿಶ್ವ ಹಿಂದೂ ಪರಿಷತ್ ಕೊಕ್ಕಡ ಇದರ ಅಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಶಶಿ ಕೊಕ್ಕಡ, ಕೋಶಾಧಿಕಾರಿ ಫಣಿರಾಜ್ ಜೈನ್, ಸದಸ್ಯರಾದ ಡಾ. ಗಣೇಶ್ ಪ್ರಸಾದ್, ಸಾಂತಪ್ಪ ಮಡಿವಾಳ, ಕೀರ್ತಿನ್ ಭಂಡಾರಿ, ಗಣೇಶ್ ದೇವಾಡಿಗ, ಗಣೇಶ್ ಹಿತ್ತಿಲು, ಪ್ರವೀಣ್ ಕೊಕ್ಕಡ ಉಪಸ್ಥಿತರಿದ್ದರು.









