ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕಿ ಶ್ರದ್ದಾ ಶೆಟ್ಟಿ ಎಣಿಂಜೆ ಅವರು ಸೌತಡ್ಕ ದೇವಸ್ಥಾನಕ್ಕೆ ಭೇಟಿ, ವಿಶೇಷ ಪೂಜೆ

0

ಬೆಳ್ತಂಗಡಿ: ಲಾಯಿಲ ಗ್ರಾಮದ ಎಣಿಂಜೆ ನಿವಾಸಿ ಶಾರದ ಮತ್ತು ಶೇಖರ ಶೆಟ್ಟಿ ದಂಪತಿಯ ಪುತ್ರಿ ಶ್ರದ್ದಾ ಶೆಟ್ಟಿಯವರು ಜ. 6ರಂದು ಶ್ರೀ ಕ್ಷೇತ್ರ ಸೌತಡ್ಕಕ್ಕೆ ತನಗೆ ಸಿಕ್ಕಿದ ಪ್ರಶಸ್ತಿಯೊಂದಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.

ಪ್ರಸ್ತುತ ಶ್ರದ್ದಾ ಶೆಟ್ಟಿಯವರು ಉಜಿರೆ ಎಸ್‌. ಡಿ. ಎಂ ಕಾಲೇಜಿನಲ್ಲಿ ಬಿಎಡ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಅವರು ತನ್ನ ಹವ್ಯಾಸವಾಗಿ ಹೂವಿನ ರಂಗೋಲಿಗಳನ್ನು ಬಿಡಿಸುತ್ತಿದ್ದರು. ಇತ್ತೀಚಿಗೆ ಬೃಹದಾಕಾರದ ಹೂವಿನ ರಂಗೋಲಿಯನ್ನು ಬಿಡಿಸಿ ವಿಶ್ವದಾಖಲೆ ನಿರ್ಮಿಸಿದರು. ಈ ಹೂವಿನ ರಂಗೋಲಿ ಬಿಡಿಸಲು ಸೌತಡ್ಕದಿಂದಲೇ ಹೂವುಗಳನ್ನು ಕೊಂಡೋಗಿರುವುದು ಕೂಡಾ ಪ್ರಶಸ್ತಿ ಲಭಿಸಲು ಮತ್ತು ವಿಶ್ವ ದಾಖಲೆ ನಿರ್ಮಿಸಲು ಕಾರಣವಾಯಿತೆಂದು ಪ್ರಶಸ್ತಿ ವಿಜೇತೆ ಶ್ರದ್ದಾ ಶೆಟ್ಟಿರವರ ಮನದಾಳದ ಮಾತಾಗಿತ್ತು.

ಪ್ರಸ್ತುತ ಅವರು ಬೆಳ್ತಂಗಡಿ ಭಕ್ತಿ ಹೆಜ್ಜೆ ಬಳಗದ ಸದಸ್ಯೆ ಮತ್ತು ಕನ್ನಾಜೆ ಶ್ರೀ ದುರ್ಗಾ ಭಜನಾ ಮಂಡಳಿಯ ಭಜಕಿಯಾಗಿರುತ್ತಾರೆ. ಇವರ ಸಾಧನೆಗೆ ಇನ್ನೊಂದು ಗರಿಮೆ ಕೂಡಾ ಸೇರಿಕೊಂಡಿದೆ. ಸಾಧನೆ ಎಂದರೆ 1 ಗಂಟೆ 39 ನಿಮಿಷದಲ್ಲಿ 8 ಫೀಟ್ ಹೂವಿನ ರಂಗೊಲಿಯನ್ನು ತಯಾರಿಸಿ, ದಾಖಲೆ ನಿರ್ಮಿಸಿದ್ದು ಈ ಶ್ರಮದ ಫಲವಾಗಿ ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಲಭಿಸಿದ್ದು, ಮುಂದಕ್ಕೆ ಇದೇ ಸಾಧನೆಗೆ ನವಂಬರ್ ತಿಂಗಳಿನಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಲಭಿಸಿದೆ. ಈ ಸಾಧನೆಯನ್ನು ಮನಗಂಡು ಹಲವಾರು ಗಣ್ಯರು ಭೇಟಿಯಾಗಿ ಸಾಧನೆಯನ್ನು ಪ್ರೋತ್ಸಾಹಿಸಿ, ಸನ್ಮಾನಿಸಿರುತ್ತಾರೆ.

ಸೌತಡ್ಕ ದೇವಸ್ಥಾನದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಶ್ರೀ ಲಕ್ಷ್ಮೀ ಡಿಜಿಟಲ್ಸ್ ನ ಮಾಲಕ ಶಶಿ ಕೊಕ್ಕಡ, ಭಕ್ತಿ ಹೆಜ್ಜೆ ಬಳಗದ ಸದಸ್ಯ ದಿನೇಶ್ ಗೌಡ ಕೊಯ್ಯೂರು ಹಾಗೂ ಸಾಧಕಿಯ ಪೋಷಕರಾದ ಶೇಖರ ಶೆಟ್ಟಿ ಮತ್ತು ಮನೆಯವರು ಮತ್ತು ಅವರ ಸಹಪಾಠಿ ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here