






ಕೊಯ್ಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ, ಹೇಮಾವತಿ ಅವರ ಪ್ರೀತಿಯ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಈಗಾಗಲೇ ಪ್ರತಿ ತಿಂಗಳು ಮಾಸಾಸನವನ್ನು ಪಡೆಯುತ್ತಿರುವ ವಾತ್ಸಲ್ಯ ಸದಸ್ಯರಾದ ಬೆಜಕ್ರೆರವರ ವಾತ್ಸಲ್ಯ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೌರವಾನ್ವಿತ ಕಾರ್ಯನಿರ್ವಾಹಕ, ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್. ರವರು ಹಸ್ತಾಂತರಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬೆಳೆದು ಬಂದ ಹಾದಿ, ಭೂಶಕ್ತಿ ಜನಶಕ್ತಿ ಜಲಶಕ್ತಿಯೊಂದಿಗೆ ತಾಲೂಕಿನ ಕೃಷಿಭೂಮಿಯ ಅಭಿವೃದ್ಧಿಯ ಚಿಂತನೆಯನ್ನು ಇಟ್ಟುಕೊಂಡು ಅಂದು ಪೂಜ್ಯರ ಕನಸಿನಂತೆ ಪ್ರಗತಿ- ಬಂದು ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬರ ಸರ್ವಾಂಗೀಣ ಹಾಗೂ ಗ್ರಾಮದ ಅಭಿವೃದ್ಧಿಗೆ ಯೋಜನೆಯು ಆಧಾರವಾಗಿ ನಿಂತು ಅದೆಷ್ಟೋ ಕುಟುಂಬಗಳ ಬದುಕನ್ನು ಬೆಳಗಿಸಿದೆ.
ಒಂದು ಮನೆಯಲ್ಲಿ ಮನೆಯ ಪೂರ್ಣವಾದ ಮೂಲಭೂತ ಸೌಕರ್ಯ ಇಲ್ಲದೆ, ಆ ಮನೆಯಲ್ಲಿ ಜೀವನವನ್ನು ಕಳೆಯುತ್ತಿದ್ದ ಬೇಜಕ್ರೆರವರ ಮನೆಯನ್ನು ಗುರುತಿಸಿ, ಇಂದು ಬೇಜಕ್ರೆರವರಿಗೆ ಮನೆಯನ್ನು ಯೋಜನೆಯ ವತಿಯಿಂದ ನಿರ್ಮಿಸಿ ಸಂತೋಷದಿಂದ ಈ ಮನೆಯನ್ನು ಕಾರ್ಯನಿರ್ವಾಹಕ, ನಿರ್ದೇಶಕ ಅನಿಲ್ ಕುಮಾರ್ ರವರು ಹಸ್ತಾಂತರಿಸಿ ಶುಭ ಹಾರೈಸಿದರು.



ಗ್ರಾಮ ಪಂಚಾಯತಿ ಅಧ್ಯಕ್ಷ ದಯಾಮಣಿ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಾಸಕ್ಕೆ ಮೂಲಭೂತ ವ್ಯವಸ್ಥೆಗಳು ಇಲ್ಲದೆ ಇರುವ ಮನೆಯನ್ನು ಗುರುತಿಸಿ ಆ ಮನೆ ನಿರ್ಮಾಣವನ್ನು ವಾತ್ಸಲ್ಯ ಕಾರ್ಯಕ್ರಮದ ಮೂಲಕ ಮಾಡಿಕೊಡುವಂತಹ ಈ ಒಂದು ಯೋಜನೆ ಬಹಳ ಅರ್ಥಪೂರ್ಣವಾದ ಯೋಜನೆಯಾಗಿದ್ದು, ಅವಕಾಶ ಒದಗಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯ ಪ್ರವೀಣ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹರೀಶ್ ಗೌಡ, ಪ್ರಗತಿ ಬಂದು ಒಕ್ಕೂಟದ ಅಧ್ಯಕ್ಷ ಪ್ರವೀಣ್ ಮಲೆಬೆಟ್ಟು, ಬಜಿಲ ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ, ಗ್ರಾಮ ಪಂಚಾಯತ್ ಸದಸ್ಯ ಯಶವಂತ ಗೌಡ, ಶಾರದ, ವಿಶಾಲಾಕ್ಷಿಯವರು ಉಪಸ್ಥಿತರಿದ್ದರು. ಸ್ಥಳೀಯರಾದ ಬೊಮ್ಮ, ಉಮೇಶ್ ಆಚಾರಿ, ವೆಂಕಣ್ಣ, ನವೀನ್ ವಾದ್ಯಕೋಡಿ, ದೊಂಬಯ್ಯ, ಮೇಲ್ವಿಚಾರಕ ಸುಶಾಂತ್, ಸೇವಾಪ್ರತಿನಿಧಿ ಕುಸುಮಾವತಿ ಮತ್ತು ಲೀಲಾರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಯಶೋಧರ್ ರವರು ಸ್ವಾಗತಿಸಿ, ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಮಧುರಾ ವಸಂತ್ ಧನ್ಯವಾದ ನೀಡಿದರು.









