






ಬೆಳ್ತಂಗಡಿ: ತಾಲ್ಲೂಕು ಕಚೇರಿಗೆ ಶಾಸಕ ಹರೀಶ್ ಪೂಂಜ ಅವರು ಜ.6ರಂದು ಭೇಟಿ ನೀಡಿ ಕಚೇರಿಯಲ್ಲಿ ಸಂಜೆ ಅಧಿಕಾರಿಗಳು ಗೈರು ಎಂದು ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದ ಆರೋಪದ ಮೇಲೆ ಹಾಜರಾತಿಯನ್ನು ಪರಿಶೀಲನೆ ನಡೆಸಿದರು.



ಸಾರ್ವಜನಿಕರ ಕುಂದುಕೊರತೆ ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ವೆ ಇಲಾಖೆಗೆ ಭೇಟಿ ನೀಡಿದ ಶಾಸಕರು ಕಡತ ಬಾಕಿಯಾಗಿರುವುದನ್ನು ಗಮನಿಸಿ ಕೂಡಲೇ ವಿಲೇವಾರಿ ಮಾಡುವಂತೆ ಸೂಚಿಸಿದರು.


ಕಡತಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 94/ಸಿ ದಾಖಲೆಗಳನ್ನು ಪ್ರಜ್ವಲ್ ಹಾಗೂ ಹೇಮಾ ಇವರಲ್ಲಿ ಪಡೆದುಕೊಂಡರುತಾಲ್ಲೂಕು ಕಚೇರಿಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಿದ ಅವರುತಹಶೀಲ್ದಾರ್ ಕಚೇರಿ, ಮೀಟಿಂಗ್ ಹಾಲ್, ಭೂಮಿ ಶಾಖೆ, ಆಹಾರ ಶಾಖೆ, ಸರ್ವೇ ಇಲಾಖೆಗೆ – ಅಭಿಲೇಖಾಲಯ, ರೇಕಾಡ್ ರೂಮ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.









