ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಶನ್ ನಿಂದ ರಕ್ತದಾನ ಶಿಬಿರ

0

ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ಹಯಾತುಲ್ ಇಸ್ಲಾಂ ಮದರಸ ಹಾಗೂ ಮಂಗಳೂರು ವೆನ್ ಲಾಕ್ ಸರಕಾರಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ಮರ್ಹೂಂ ಶಾಝಿನ್ (s/o ಸಲೀಂ ಮುರ) ಸ್ಮರಣಾರ್ಥ ರಕ್ತದಾನ ಶಿಬಿರ ಖಿಲರ್ ಜುಮ್ಮಾ ಮಸೀದಿ ವಠಾರದಲ್ಲಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ನಡೆಯಿತು. ರಕ್ತದಾನ ಶಿಬಿರ ಉದ್ಘಾಟಿಸಿ ಅಕ್ಬರ್ ಬೆಳ್ತಂಗಡಿ ಮಾತನಾಡಿದರು. ವೆನ್ ಲಾಕ್ ಸರಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಆಂಟೋನಿ, ಹಯಾತುಲ್ ಇಸ್ಲಾಂ ಮದರಸ ಅಧ್ಯಕ್ಷ ಬಿ. ಶೇಕುಂಞ್ಞ ಕಾರ್ಯಕ್ರಮವನ್ನು ಉದ್ದೇಶಿಸಿ ಅತಿಥಿ ಮಾತುಗಳನ್ನಾಡಿದರು.

ನಾವೂರು ಮುರ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಖಾದರ್ ನಾವೂರು ಮಾತನಾಡಿ ರಕ್ತದಾನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಖಿಳರ್ ಜುಮ್ಮಾ ಮಸೀದಿ ಖತೀಬರಾದ ಹನೀಫ್ ಫೈಝಿ, ನಾವೂರು ಮುರ ಮುಹಿಯುದ್ದೀನ್ ಜುಮ್ಮಾ ಮಸೀದಿ ಖತೀಬರಾದ ಬಶೀರ್ ಸಅದಿ ಕೆಮ್ಮಾರ, ಬೆಳ್ತಂಗಡಿ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಬಿ.ಎ ನಝೀರ್, ಖಿಳರ್ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಗಾಳದ ರಝಾಕ್ ಕೋಡಿಸಭೆ, ಸಲೀಂ ಮುರ, ಹನೀಫ್ ವರ್ಷಾ, ಇಸ್ಮಾಲಿ ಐ.ಬಿ, ಮಹಮ್ಮದ್ ಕುದ್ರಡ್ಕ, ಅಬ್ಬಾಸ್ ಸಂಜಯನಗರ, ರಿಜ್ವಾನ್ ಬಿ.ಕೆ, ರಶೀದ್ ಬೆಳ್ತಂಗಡಿ, ರಿಯಾಝ್ ಸಂಜಯನಗರ, ಶೈರೋಝ್ ಉದಯನಗರ ಹಾಗೂ ಊರಿನ ನಾಗರಿಕರು, ಇತರರು ಉಪಸ್ಥಿತರಿದ್ದರು.

ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು 53 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಶಬೀರ್ ಸಂಜಯನಗರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here