








ವೇಣೂರು: ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ವೇಣೂರು ಶಾಖೆಯಲ್ಲಿರುವ ಗುರುದೇವ ನವೋದಯ ಸ್ವಸಹಾಯ ಸಂಘದ ಸದಸ್ಯರಾದ ಲೀಲಾ, ಧನುಶ್ರೀ ನವೋದಯ ಸ್ವಸಹಾಯ ಸಂಘದ ಸದಸ್ಯೆ ಅಖಿಲಾ, ವಿನಾಯಕ ನವೋದಯ ಸ್ವಸಹಾಯ ಸಂಘದ ಸದಸ್ಯೆ ರಕ್ಷಾ, ಸಮೃದ್ಧಿ ನವೋದಯ ಸಂಘದ ಸದಸ್ಯೆ ರೇಖಾ ಅವರಿಗೆ ಮಂಗಳೂರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಮಂಜೂರಾದ ಚೈತನ್ಯ ವಿಮಾ ಒಟ್ಟು ಮೊತ್ತ ರೂ.27000/ ಚೆಕ್ ನ್ನು ಶಾಖೆಯ ಶಾಖಾ ವ್ಯವಸ್ಥಾಪಕ ನಿತೀಶ್ ಹೆಚ್. ಅವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಪ್ರೇರಕಿಯಾದ ಆಶಾಲತಾ ಹಾಗೂ ಶಾಖಾ ಸಿಬ್ಬಂದಿಗಳಾದ ಭಗವಾನ್, ನೀತಾ, ಅಜಿತ್, ಭಾರತಿ ಉಪಸ್ಥಿತರಿದ್ದರು.









