







ಬೆಳ್ತಂಗಡಿ: ಪಿಲಿಗೂಡು ಉಪ್ಪಿನಂಗಡಿ ರಸ್ತೆ ತೀವ್ರ ಹದಗೆಟ್ಟು,ದಿನದಿಂದ ದಿನಕ್ಕೆ ಹೊಂಡಗಳ ಆಳ,ಅಗಳ ಹೆಚ್ಚಾಗುತ್ತಿದ್ದ ಬೆನ್ನಲ್ಲೇ ಇದೀಗ ಪ್ಯಾಚ್ ವರ್ಕ್ ಆರಂಭಗೊಂಡಿದೆ. ಕುಪ್ಪೆಟ್ಟಿ ಮುಖ್ಯರಸ್ತೆಯ ಹೊಂಡ ಮುಚ್ಚುವ ಕೆಲಸ ಆರಂಭಗೊಂಡಿದ್ದು,ಈಗಾಗಲೇ ಡಾಮರೀಕರಣ ಜ.6ರಂದು ಆರಂಭವಾಗಿದೆ.



ಇಡೀ ರಸ್ತೆಯೇ ಹೊಂಡ ಬಿದ್ದಿದ್ದರಿಂದ ಕುಪ್ಪೆಟ್ಟಿಯಲ್ಲಿ ಪೂರ್ಣ ಡಾಮರೀಕರಣ ಮಾಡಬೇಕಾದ ಅನಿವಾರ್ಯತೆಯಿದೆ. ಹಲೇಜಿಯಿಂದಲೇ ಹೊಂಡಗಳಿದ್ದು ಕುಪ್ಪೆಟ್ಟಿಯಲ್ಲಿ ಪ್ಯಾಚ್ ವರ್ಕ್ ಆರಂಭಗೊಂಡಿರುವ ಬಗ್ಗೆಯೂ ಸಾರ್ವಜನಿಕರಲ್ಲಿ ಪ್ರಶ್ನೆಗಳಿವೆ. ಕಾಮಗಾರಿ ನಿರ್ವಹಣಾ ಟೆಂಡರ್ ಪಡೆದವರಿಂದ ನಡೆಯುತ್ತಿದೆ, ಇದು ಪ್ಯಾಚ್ ವರ್ಕ್ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸುದ್ದಿಗೆ ಮಾಹಿತಿ ನೀಡಿದ್ದಾರೆ. ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ಸುದ್ದಿ ನಿರಂತರ ವರದಿ ಪ್ರಕಟಿಸಿತು.









