ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ

0

ಉಜಿರೆ: ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ವೀರಾಂಗಣ ಡಿ. ಅನಿತಾ ಸುರೇಂದ್ರ ಕುಮಾರ್ ಅವರ ಪರಿಕಲ್ಪನೆಯ, ರಾಷ್ಟ್ರೀಯ ಕಾರ್ಯಾಧ್ಯಕ್ಷ ವೀರ್ ಡಿ. ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ಪಿಲಿಕುಳದ ಸ್ಕೌಟ್ ಗೈಡ್ ಭವನದಲ್ಲಿ ಜ. 3 ಮತ್ತು 4ರಂದು ನಡೆದ ಭಾರತೀಯ ಜೈನ್ ಮಿಲನ್ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಉಜಿರೆಯ ಹರ್ಷದಾ ತಂಡ ತೃತೀಯ ಸ್ಥಾನ ಪಡೆದಿರುತ್ತಾರೆ.

ಈ ತಂಡದಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳು ಅನಿಕ ಜೈನ್ ಹಾಗೂ ಶುಕ್ತಿ ಜೈನ್ ಭಾಗವಹಿಸಿರುತ್ತಾರೆ. ಉಜಿರೆಯ ತೃಪ್ತ ಕುಮಾರ್ ಜೈನ್ ಸಂಯೋಜಿಸಿದ ವಿಜೇತ ಜಿನಭಜನಾ ತಂಡಗಳಿಗೆ ಸೋನಿಯಾ ಯಶೋವರ್ಮ ರವರು ಮಾರ್ಗದರ್ಶನ ನೀಡಿ, ಅಭಿನಂದಿಸಿರುತ್ತಾರೆ. ಶಾಲೆಯಿಂದ ವಿಜೇತರಾದ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here