ಲಾಯಿಲ: ಕರ್ನೋಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ:ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ಅಳವಡಿಸಲಾದ ಸಿ. ಸಿ. ಟಿ.ವಿ ಹಸ್ತಾಂತರ ಕಾರ್ಯಕ್ರಮ-ಶಿಕ್ಷಕಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಪೋಷಕರ ಸಭೆ

0

ಲಾಯಿಲ: ಕರ್ನೋಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.3ರಂದು 2000-2001ನೇ ಸಾಲಿನ 7ನೇ ತರಗತಿಯ ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ಅಳವಡಿಸಲಾದ ಸಿ. ಸಿ. ಟಿ.ವಿ ಹಸ್ತಾಂತರ ಕಾರ್ಯಕ್ರಮ ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ಶಿಕ್ಷಕಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಪೋಷಕರ ಸಭೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಧನಂಜಯ್ ರಾವ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಲ್. ಸಂತೋಷ್ ಕುಮಾರ್ , ಶಾಲೆಯ ಹಿರಿಯ ವಿದ್ಯಾರ್ಥಿ ನಿವೃತ್ತ Airforce ಅಧಿಕಾರಿ ಸುನೀಲ್‌ ಶೆಣೈ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗಣೇಶ್ ಆರ್., ಶಾಲಾ ಮುಖ್ಯೋಪಾಧ್ಯಾಯ ಜಗನ್ನಾಥ.ಎಂ. S.D.M.C ಅಧ್ಯಕ್ಷೆ ಸೌಮ್ಯ ಮತ್ತು ವರ್ಗಾವಣೆಗೊಂಡ ಶಿಕ್ಷಕಿಯರು ಉಪಸ್ಥಿತರಿದ್ದರು.

65,000 ಮೌಲ್ಯದಲ್ಲಿ ಶಾಲೆಗೆ ಅಳವಡಿಸಲಾದ C.C.T.V ಹಾಗೂ 15,000 ಮೌಲ್ಯದಲ್ಲಿ ಶಾಲೆಗೆ ಕೊಡುಗೆಯಾಗಿ ನೀಡಿದ ಇನ್ವರ್ಟರ್ ಅನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಲಕ್ಷ್ಮೀ ಮತ್ತು ಕನ್ನಾಜೆ ರಾಯಪ್ಪ ಯಾನೆ ಲಕ್ಷ್ಮಣ ಶೆಣೈ ಸ್ಮಾರಕ ದತ್ತಿನಿಧಿ ಯೋಜನೆಯು ಕಳೆದ 15 ವರ್ಷಗಳಿಂದ ಶಾಲೆಯಲ್ಲಿ ನಡೆಯುತ್ತಿದ್ದು, ಪ್ರತಿ ವರ್ಷ ಶಾಲೆಯಲ್ಲಿ ಕಲಿಯುತ್ತಿರುವ 1ನೇ ತರಗತಿಯ ಒಬ್ಬ ಬಡ ವಿದ್ಯಾರ್ಥಿಯ ಹೆಸರಿನಲ್ಲಿ ರೂಪಾಯಿ 10,000 ಮೊತ್ತವನ್ನು ಬ್ಯಾಂಕ್ ನಲ್ಲಿ ನಿರಖು ಠೇವಣಿ ಇಡುವ ಮೂಲಕ ಆ ವಿದ್ಯಾರ್ಥಿಗೆ 18 ವರ್ಷ ತುಂಬಿದ ನಂತರ ಅಸಲು ಹಾಗೂ ಬಡ್ಡಿಯ ಮೊತ್ತವು ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗ ಆಗುವ ಸದುದ್ದೇಶದಿಂದ ಈ ಬಾರಿ ಇಂದಿರಾ ನಾರಾಯಣ ಜೋಗಿ ಅವರ ಮಗ 1ನೇ ತರಗತಿ ಚೇತನ್ ನನ್ನು ದತ್ತಿನಿಧಿ ಯೋಜನೆಗೆ ಆಯ್ಕೆ ಮಾಡಿ, ಆತನ ಹೆಸರಿನಲ್ಲಿ ಇರಿಸಿದ ಮೊತ್ತದ ಬಾಂಡ್ ಅನ್ನು ಯೋಜನೆಯ ಸಂಚಾಲಕ ಸುನಿಲ್ ಶೆಣೈ ಅವರು ಫಲಾನುಭವಿ ವಿದ್ಯಾರ್ಥಿಗೆ ವಿತರಿಸಿದರು.

C.C.T.V ಅಳವಡಿಸಲು ಧನ ಸಹಾಯ ಮಾಡಿದ 2000- 2001ನೇ ಸಾಲಿನ 7ನೇ ತರಗತಿಯ ಉಪಸ್ಥಿತರಿದ್ದ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇನ್ವರ್ಟರ್ ಕೊಡುಗೆ ನೀಡಿದ ಆರಿಫ್ ಆದರ್ಶ ನಗರ ಅವರ ಪರವಾಗಿ ಅವರ ತಂದೆ ಇಬ್ರಾಹಿಂ ರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ, ದ.ಕ.ಜಿಲ್ಲಾ ಕೆ. ಡಿ. ಪಿ ಸದಸ್ಯ ಸಂತೋಷ್ ಕುಮಾರ್ ಅವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಗೌರವಿಸಲಾಯಿತು.

ಶಾಲೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ಗಂಗಾರಾಣಿ ನಾ ಜೋಶಿ, ತ್ರಿಶಾಲ ಜೈನ್, ಮಮತಾ ಕೆ. ಅವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ, ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಗೂ S.D.M.C ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಶಾಲಾ ಮಕ್ಕಳು ಮತ್ತು ಶಿಕ್ಷಕರು ವರ್ಗಾವಣೆಗೊಂಡ ಶಿಕ್ಷಕಿಯರ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿಯರು ತಮ್ಮ ಸೇವಾ ಅವಧಿಯ ಅನುಭವವನ್ನು ಹಂಚಿಕೊಂಡರು. ವರ್ಗಾವಣೆಗೊಂಡ ಶಿಕ್ಷಕಿಯರು ಶಾಲೆಗೆ ಮುಂದಿನ ದಿನಗಳಲ್ಲಿ ನಿತ್ಯೋಪಯೋಗವಾಗುವ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.

ಸಹ ಶಿಕ್ಷಕಿ ಲೀನಾ ಡಿ ಸೋಜಾ ಮತ್ತು ಅಶ್ವಿನಿ ಅವರು ವರ್ಗಾವಣೆಗೊಂಡ ಶಿಕ್ಷಕಿಯರ ವೈಯಕ್ತಿಕ ಪರಿಚಯವನ್ನು ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, 2000-2001 ರ 7ನೇ ತರಗತಿಯ ಹಳೆ ವಿದ್ಯಾರ್ಥಿಗಳು, S.D.M.C ಸದಸ್ಯರು, ಪೋಷಕರು ಮತ್ತು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಜಗನ್ನಾಥ್ ಎಂ. ಸ್ವಾಗತಿಸಿ, ಶಾಲಾ ಸಹ ಶಿಕ್ಷಕಿ ಉಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕ ಕೃಷ್ಣ ಕುಮಾರ್ ಧನ್ಯವಾದಗೈದರು.

LEAVE A REPLY

Please enter your comment!
Please enter your name here