ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಇಜ್ಜಾವು ಎ ಮಾಧವ ಆಚಾರ್ಯ ಮನೆಯವರಿಂದ ಲಕ್ಷ ಮೋದಕ ಹವನ ಪ್ರಾರಂಭ-ಇಂದಿನಿಂದ ಜ. 6ವರೆಗೆ ನಡೆಯಲಿದೆ ಲಕ್ಷ ಮೋದಕ ಹವನ

0

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಜ.2 ರಿಂದ ಜ.6 ವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಇಜ್ಜಾವು ಶಶಿಕಲಾ ಮತ್ತು ಎ ಮಾಧವ ಆಚಾರ್ಯ ಮನೆಯವರಿಂದ ಲಕ್ಷ ಮೋದಕ ಹವನವು ನಡೆಯಲಿದೆ.

ಜ.2 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಮಂಟಪ ಸಂಸ್ಕಾರ, ಆಗ್ನಿ ಜನನ,ನಡೆದು ರಾತ್ರಿ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಜ.3 ರಂದು ಬೆಳಿಗ್ಗೆ ಮೋದಕ ಹೋಮ ಪ್ರಾರಂಭ, ಪೂರ್ಣಾಹುತಿ, ಮಹಾಪೂಜೆ ನಡೆಯಲಿದೆ. ಜ.4 ರಂದು ಬೆಳಿಗ್ಗೆ ಮೋದಕ ಹೋಮ ಪ್ರಾರಂಭ, ಪೂರ್ಣಾಹುತಿ, ಪಾರಾಯಣ, ಮಹಾಪೂಜೆ ನಡೆಯಲಿದೆ.

ಜ.5 ರಂದು ಬೆಳಿಗ್ಗೆ ಮೋದಕ ಹೋಮ ಪ್ರಾರಂಭ, ಮಧ್ಯಾಹ್ನ ಪೂರ್ಣಾಹುತಿ, ಸಂಜೆ ಪಾರಾಯಣ , ಅಷ್ಟಾವಧಾನ ಸೇವೆ, ರಾತ್ರಿ ಮಹಾಪೂಜೆ ನಡೆಯಲಿದೆ.

ಜ.6 ರಂದು ಬೆಳಿಗ್ಗೆ ಮೋದಕ ಹೋಮ ಪ್ರಾರಂಭ, ಲಕ್ಷ ಮೋದಕಯಾಗದ ಮಹಾಪೂರ್ಣಾಹುತಿ ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಮೂಡಪ್ಪ ಸೇವೆ, ಅಷ್ಟಾವಧಾನ ಸೇವೆ ನಡೆದ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here