








ಶಿಶಿಲ: ಡಿ.30ರಂದು ಶಿಶಿಲದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಿಶಿಲ ಗ್ರಾಮದ ರಾಘವೇಂದ್ರ ಗಿರಿಜ ದಂಪತಿಗಳು 3 ವರ್ಷದ ಹಿಂದೆ 940 ಅರ್ಜಿ ಕೊಟ್ಟಿದ್ದು ಅದನ್ನೂ ಇದುವರೆಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮಂಜೂರು ಮಾಡಿರುವುದಿಲ್ಲ. ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕರು ಆ ಮನೆಗೆ ತೆರಳಿ ಪರಿಶೀಲಿಸಿ ಒಂದು ವಾರದಲ್ಲಿ ಹಕ್ಕುಪತ್ರ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಹಿಂದೆ ಈ ವಿಷಯವಾಗಿ ಸುದ್ದಿ ಬಿಡುಗಡೆ ವರದಿ ಪ್ರಕಟ ಮಾಡಿತ್ತು.









