ಉಜಿರೆ: ಪ್ರತಿಭಾ ಸಂಗಮ ಕಾರ್ಯಕ್ರಮ

0

ಉಜಿರೆ: ಮಿತ್ರ ಯುವಕ ಮಂಡಲ ಮತ್ತು ಮಿತ್ರ ಮಹಿಳಾ ಮಂಡಳಿ ಅವರ 29ನೇ ವರ್ಷದ ಪ್ರತಿಭಾ ಸಂಗಮ ಕಾರ್ಯಕ್ರಮ ಡಿ. 27ರಂದು ಸಂಜೆ ಯುವಕ ಮಂಡಲದ ವಠಾರದ ಅರಳಿ ರಂಗ ಮಂದಿರದಲ್ಲಿ ಜಂಟಿ ಸಂಘಟನೆಗಳ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಅಶೋಕ್ ಕುಕ್ಕೇಶ್ರೀ ಅವರು ವಹಿಸಿಕೊಂಡು, ಸಭಾ ಉದ್ಘಾಟಕರಾಗಿ ವಿನಯ್ ಚಂದ್ರ ಉಜಿರೆ ದೀಪಾ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಹರೀಶ್ ಶೆಟ್ಟಿ ಬೆಳ್ತಂಗಡಿ, ರವಿಚಂದ್ರ ಗಾಂಧಿನಗರ, ಗಿರೀಶ್ ದೊಂಪದಪಲ್ಕೆ ಹಾಗೂ ಸನ್ಮಾನಿತರಾಗಿ ವೆಂಕಟೇಶ್ ಆಚಾರ್ಯ ಕಾಶಿಬೆಟ್ಟು ಮತ್ತು ಸಭಾ ಉಪಸ್ಥಿತಿಯಲ್ಲಿ ಮಿತ್ರ ಮಹಿಳಾ ‌ಮಂಡಳಿಯ ಅಧ್ಯಕ್ಷೆ ಸವಿತಾ ಸುರೇಶ್ ಅವರು ಉಪಸ್ಥಿತರಿದ್ದರು. ಅರಳಿ ಭಜನಾ ತಂಡದಿಂದ ಕುಣಿತ ಭಜನೆ ಹಾಗೂ ಊರಿನ ವಿವಿಧ ನೃತ್ಯ, ಗಾಯನ, ಪ್ರಹಸನದ ಮೂಲಕ ಅನಾವರಣಗೊಂಡು ತೆಲಿಕೆದ ತೆನಾಲಿ ತಂಡ ಕಾರ್ಕಳ ಅವರ ಮೂಲಕ ತೆಲಿಕೆದ ಬರ್ಸ ಕಾಮಿಡಿ 90 ನಡೆಯಿತು. ಸಂತೋಷ್ ಸಾಲಿಯನ್ ಅವರು ಸ್ವಾಗತಿಸಿದರು. ಚೇತನ್ ಬಂಗೇರ ಅರಳಿ ಮತ್ತು ನಿಶಿತ್ ಬಂಗೇರ ನಾನಿಲ್ದಡಿ ಅವರು ಕಾರ್ಯಕ್ರಮದ‌ ನಿರೂಪಣೆ ಮಾಡಿದರು. ಲೋಲಾಕ್ಷಿ ರಾಘವ ಗೌಡ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here