








ನಾವೂರು: ಯುನೈಟೆಡ್ ಸ್ಪೋರ್ಟ್ಸ್ ಹಾಗು ಚಾರಿಟೇಬಲ್ ಟ್ರಸ್ಟ್ ನ ಮಹಾಸಭೆಯು ಡಿ.28ರಂದು ನಾವೂರಿನಲ್ಲಿ ನಡೆಯಿತು. ನಾವೂರಿನಲ್ಲಿ ಕ್ರೀಡೆಯ ಜೊತೆ ಹಲವಾರು ಸಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಈ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಯುವ ಉದ್ಯಮಿ ಇಮೇಜ್ ಗ್ರೂಪ್ ನ ಆಡಳಿತ ನಿರ್ದೇಶಕ ಮಹಮ್ಮದ್ ಅರ್ಷದ್ ಅವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಅಂಡರ್ ಆರ್ಮ್ ಕ್ರೀಕೆಟಿನ ದಂತಕತೆ ಮಜೀದ್ ನಾವೂರು ಆಯ್ಕೆಯಾದರು. ಗೌರವ ಅದ್ಯಕ್ಷರಾಗಿ ಅಶ್ರಫ್ ಎನ್. ಎಚ್., ತಂಡದ ನೂತನ ಕಪ್ತಾನನಾಗಿ ಸಿ. ಎಮ್. ಚಿಕನ್ ರ ಮಾಲಿಕ ಇರ್ಷಾದ್ ಸಿ. ಎಮ್., ಕಾರ್ಯದರ್ಶಿಯಾಗಿ ಇಮ್ರಾನ್ ಸಿ. ಎಮ್., ಶಶಿಧರ ಹಾಗೂ ಕೊಶಾದಿಕಾರಿಯಾಗಿ ತ್ವಾಹಿರ್ ನಾವೂರು, ಮಾದ್ಯಮ ಪ್ರತಿನಿದಿಯಾಗಿ ಅಶ್ರಪ್ ಮೇರ್ಲ ಹಾಗೂ ಶಾಹುಲ್ ಐಡಿಯಲ್ ಆಯ್ಕೆಯಾಗಿದ್ದಾರೆ.









